Wednesday, March 25, 2026
Homeಕ್ರೈಮ್ಮೂಡಿಗೆರೆ: ಶಾಲಾ ಮೈದಾನ ಈಗ ಕಾಫಿ ಒಣಗಿಸುವ ಕಣವಾಗಿದೆ: ಅಧಿಕಾರ ಕೊಟ್ಟವರ್ಯಾರು?

ಮೂಡಿಗೆರೆ: ಶಾಲಾ ಮೈದಾನ ಈಗ ಕಾಫಿ ಒಣಗಿಸುವ ಕಣವಾಗಿದೆ: ಅಧಿಕಾರ ಕೊಟ್ಟವರ್ಯಾರು?

ಮೂಡಿಗೆರೆ: ಮಕ್ಕಳ ಕ್ರೀಡಾ ಚಟುವಟಿಕೆಗೆ ಬಳಕೆಯಾಗಬೇಕಾದ ಕ್ರೀಡಾ ಮೈದಾನವನ್ನು ನಿರ್ವಹಿಸಲು ಹಣವಿಲ್ಲದೆ ಕಾಫಿ ಒಣಗಿಸುವ ಕಣವಾಗಿ ಮಾರ್ಪಟ್ಟಿತೆ ಎಂಬ ಪ್ರಶ್ನೆ ಉದ್ಭವವಾಗಿದೆ

ಹೌದು.. ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಪ್ರೌಢ ಶಾಲೆಯ ಆವರಣದಲ್ಲಿ ಕೆಲವರು ತಮ್ಮ ಕಾಫಿ ಬೀಜ ಒಣಗಿಸಲು ಸರ್ಕಾರಿ ಶಾಲೆ ಆವರಣವನ್ನು ಬಳಸಿಕೊಳ್ಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು ಸರ್ಕಾರಿ ಶಾಲಾ ಆವರಣದಲ್ಲಿ ಕಾಫಿ ಹರಡಿಕೊಳ್ಳಲು ಅನುಮತಿ ನೀಡಿದವರ್ಯಾರು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಮಕ್ಕಳ ಕ್ರೀಡಾ ಚಟುವಟಿಕೆಗೆ ಬಳಕೆಯಾಗಬೇಕಾದ ಕ್ರೀಡಾ ಮೈದಾನವನ್ನು ನಿರ್ವಹಿಸಲು ಹಣವಿಲ್ಲದೆ ಕಾಫಿ ಒಣಗಿಸುವ ಕಣವಾಗಿ ಮಾರ್ಪಡು ಮಾಡಿದ್ದಾರೆ ಎಂದು ಶಾಲೆಯ ಮುಖ್ಯಪಾಧ್ಯಾಯಿನಿ ಮೇಲೆ ಆರೋಪಿಸಿದ್ದರೆ. ಸರ್ಕಾರಿ ಶಾಲೆಯನ್ನು ನಿರ್ವಹಿಸಲು ಸರ್ಕಾರ ಅನುದಾನ ನೀಡುತ್ತದೆ.. ಸ್ಥಳೀಯರು ನೀಡುವ ಅಲ್ಪ ಹಣ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಅದಲ್ಲದೆ ಶಾಲೆಯ SDMC ಅಧ್ಯಕ್ಷರಾಗಲು ಇದೆ ಶಾಲೆಯಲ್ಲಿ ಅವರ ಮಕ್ಕಳು ಓದುತ್ತಿರಬೇಕು ಅಥವಾ ಮಕ್ಕಳನ್ನು ದತ್ತು ಪಡೆದಿರಬೇಕು ಎಂಬ ನಿಯಮವಿದ್ದು ಇಲ್ಲಿನ ಮುಖ್ಯಯೊಪಾಧ್ಯಯಿನಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿ ಸುತ್ತಿರುವುದಾಗಿ ನೇರವಾಗಿ ಆರೋಪ ಮಾಡಿದ್ದಾರೆ.

ಬೆಟ್ಟಗೆರೆ ಪ್ರೌಢ ಶಾಲೆಯ ಕ್ರೀಡಾ ಮೈದಾನದಲ್ಲಿ ನಾಲ್ಕೈದು ದಿನಗಳಿಂದ ಸ್ಥಳೀಯ ವ್ಯಕ್ತಿಯೊಬ್ಬರು ಕಾಫಿ ಒಣಗಿಸುವ ಸ್ಥಳವಾಗಿ ಮೈದಾನ ವನ್ನು ಮಾರ್ಪಾಟು ಮಾಡಿಕೊಂಡಿದ್ದಾರೆ.

ಆಸ್ಪತ್ರೆಯ ಹಿಂಭಾಗದಲ್ಲಿ ಕಾಣುವ ಸರಕಾರಿ ಶಾಲೆ ಸುಮಾರು ಒಂದೂವರೆ ಎಕರೆಯಲ್ಲಿ ಮೈದಾನ ರಚನೆಗೊಂಡಿದೆ. ಆದರೆ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಉಪಯೋಗವಾಗುತ್ತಿರುವುದು ಅಷ್ಟಕಷ್ಟೆ.
ಮೈದಾನದ ಸುತ್ತಲೂ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿದೆ. ಆಟಕ್ಕಾಗಿ ಬಳಕೆಯಾಗಬೇಕಾದ ಮೈದಾನ ಕಾಫಿ ಒಣಗಿಸುವ ಕಣವಾಗಿದೆ.ಶಾಲೆಯ ಆಡಳಿತ ಮಂಡಳಿಯೇ ಕಾಫಿ ಒಣಗಿಸುವರಿಂದ ಹಣ ಪಡೆದು ಮೈದಾನದಲ್ಲಿ ಕಾಫಿ ಒಣಗಿಸಲು ಅನುಮತಿ ನೀಡಿದ್ದಾರೆ ಎಂದು ಹಳೇ ವಿದ್ಯಾರ್ಥಿಗಳ ಆರೋಪವಾಗಿದೆ.

ಮಕ್ಕಳ ಆಟೋಟಗಳಿಗೆ ಬಳಕೆ ಯಾಗಬೇಕಾದ ಮೈದಾನ ಕಾಫಿ ಕಣವಾಗಿ ಬದಲಾಗಿರುವುದು ಮತ್ತೊಂದು ವಿಶೇಷವಾಗಿದೆ.

ಮೈದಾನವನ್ನು ಸ್ವಚ್ಚವಾಗಿಡಲು ಶಾಲೆ ಎಸ್‌ಡಿಎಂಸಿ ಗೆ ಸಾಧ್ಯವಾಗದ ಕಾರಣ ಕಾಫಿ ಒಣಗಿಸಿ ಮೈದಾನವನ್ನು ಶುಚಿಯಾಗಿಸಿಕೊಡಿ ಎಂದು ಕಾಫಿ ಒಣಗಿಸುತ್ತಿರುವ ಮಾಲೀಕರಿಗೆ ಸೂಚಿಸಿದೆ ಎಂಬುದಾಗಿ ಸ್ಥಳೀಯರು ದೂರಿದ್ದು ಈ ಕಾರಣ ಮೈದಾನ ಕಾಫಿ ಕಣವಾಗಿದೆ. ಎಸ್.ಡಿ.ಎಂ.ಸಿ ಸದಸ್ಯರ ಪ್ರಕಾರ ಹಾವು, ಚೇಳು ಸೇರಿದಂತೆ ವಿವಿಧ ವಿಷಕಾರಿ ಜಂತುಗಳ ವಾಸಸ್ಥಾನ ಈ ಮೈದಾನವಾಗಿರುವುದರಿಂದ ಮಕ್ಕಳನ್ನು ಈ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಬಿಡುತ್ತಿಲ್ಲ.

ಈ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗೆ ಮಕ್ಕಳನ್ನು ತೊಡಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಜವಾಬು ನೀಡುತ್ತಿದ್ದಾರೆ. ಈ ಎಲ್ಲಾ ಕಾರಣಗಳನ್ನಿಟ್ಟು ಒಟ್ಟಾರೆ ಮೈದಾನವನ್ನು ಕಾಫಿ ಕಣವಾಗಿಸಲು ಹೊರಟಿರುವುದಂತೂ ಸತ್ಯವಾಗಿದೆ. ಈ ಬಗ್ಗೆ ಸ್ಥಳೀಯ ಜನರು ಆಕ್ಷೇಪ ವ್ಯಕ್ತಪಡಿಸಿದ್ದು, ಮಕ್ಕಳ ಆಟಕ್ಕೆ ಮೈದಾನವನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಈ ಹಿಂದೆ ಹಳೇ ವಿದ್ಯಾರ್ಥಿಗಳು ಶಾಲೆಯ ಮೇಲಿನ ಅಭಿಮಾನದಿಂದ ಸ್ವಚ್ಛ ಮಾಡಲು ಹೊರಟಾಗ ಶಾಲೆಯ ಮುಖ್ಯ ಶಿಕ್ಷಕರು. ನಮ್ಮ ಶಾಲೆ ಸ್ವಚ್ಛ ಮಾಡುವುದು ನಮಗೆ ಗೊತ್ತಿದೆ ಅದನ್ನು ಮಾಡಲು ನಿಮಗೇನು ಹಕ್ಕಿದೆ. ಶಾಲೆ ಬಿಟ್ಟ ಮೇಲೆ ಶಾಲೆಗೆ ಬರಲು ಅನುಮತಿ ಪಡೆಯಬೇಕು. ಎಂಬ ಬೇಜವಾಬ್ದಾರಿ ಮಾತುಗಳನ್ನು ಅಡಿ ಹೊರ ಕಳಿಸಿದ್ದಾಗಿಯು ಸಹ ಹಳೇ ವಿದ್ಯಾರ್ಥಿ ಒಬ್ಬರು ಆರೋಪ ಮಾಡಿದ್ದಾರೆ.

ಇಂದು ಕಾಫಿ ಹರಡಲು ಬಿಟ್ಟು ಸರ್ಕಾರಿ ಶಾಲಾ ಆವರಣ ವನ್ನು ಖಾಸಗಿಕಾರಣ ಮಾಡಲು ಹೊರಟಿರುವ ಮುಖ್ಯ ಶಿಕ್ಷಕರ ನಡೆ ಎಷ್ಟರ ಮಟ್ಟಿಗೆ ಸರಿ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಒಂದು ಪಕ್ಷದಲ್ಲಿ ಸಮಸ್ಸೆಯೇ ಬಗೆ ಹರಿಸದಿದ್ದಲ್ಲಿ ಸರ್ಕಾರಿ ಶಾಲೆಗೆ ಸರ್ಕಾರ ಅನುದಾನ ನೀಡದಿದ್ದಲ್ಲಿ ನಾವು ಹಣ ನೀಡುತ್ತೇವೆ ಶುಂಠಿ ಬೆಳೆಯಲು ಮುಖ್ಯ ಶಿಕ್ಷಕರು ಜಾಗವನ್ನು ಲೀಸ್ ಗೆ ನೀಡುತ್ತಾರ ಎಂದು ಕೆಲ ಸ್ಥಳೀಯರು ಪ್ರಶ್ನಿಸಿದರು

ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಶಾಲೆಗೆ ಪಬ್ಲಿಕ್ ಇಂಪ್ಯಾಕ್ಟ್ ವರದಿಗಾರ ಪುನೀತ್ ಕಡಿದಾಳ್ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದು ವಿದ್ಯಾರ್ಥಿಗಳು ನಾವು ಆಟ ಆಡಲು ಸಮಸ್ಸೆ ಆಗಿತ್ತಿದೆ. ಸರ್ ನೀವೇ ನೋಡ್ತಾ ಇದ್ದೀರಾ. ಮೊನ್ನೆ ಒಂದು ನೆಟ್ ನಲ್ಲಿ ಕಾಫಿ ಹಾಕಿದ್ದಾರೆ. ಇವತ್ತು ಎರಡು ನೆಟ್ ಹಾಕಿ ಕಾಫಿ ಒಣಗಿಸುತ್ತಿದ್ದೂ. ಆಟದ ಸಮಯದಲ್ಲಿ ನಮಗೆ ತೊಂದರೆ ಯಾಗುತ್ತಿದೆ. ಕಾಫಿ ಬೀಜದ ಮೇಲೆ ಬಾಲ್ ಹೋಗುತ್ತೆ ತೆಗೆದುಕೊಂಡು ಬರಲು ಹೋದಾಗ ಜಾರಿ ಬೀಳುತ್ತಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.


ನಮಗೆ ಟೀಚರ್ ಅನುಮತಿ ಕೊಟ್ಟಿದ್ದು ಯಾಕೆ ಎಂಬ ಅನುಮಾನ ಕಾಡುತ್ತಿರುವುದಾಗಿ. ಪ್ರತಿಕ್ರಿಯೆ ನೀಡಿದ್ದು ನಮಗೆ ಏನು ತೊಂದರೆ ಮಾಡದಂತೆ ನೋಡಿಕೊಳ್ಳಿ ಸರ್ ಟೀಚರ್ ಹೊಡೀತಾರೆ ಎಂಬ ಭಯದಿಂದ ವಿದ್ಯಾರ್ಥಿಗಳ ಮುಖದಲ್ಲಿ ಎದ್ದು ಕಾಣುತಿತ್ತು.

ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಈ ಕೂಡಲೆ ಎಚ್ಚೆತ್ತು ಕಾಫಿ ಬೀಜಗಳನ್ನು ತೆರವುಗೊಳಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!