Wednesday, August 12, 2026
Homeಜಿಲ್ಲಾಸುದ್ದಿಎನ್‌ ಆರ್‌ ಪುರ: ಅಕ್ರಮವಾಗಿ ಗಾಂಜಾ ಮಾರಾಟ : ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ, 5...

ಎನ್‌ ಆರ್‌ ಪುರ: ಅಕ್ರಮವಾಗಿ ಗಾಂಜಾ ಮಾರಾಟ : ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ, 5 ಸಾವಿರ ದಂಡ!

Telegram Group
Join Now

ಚಿಕ್ಕಮಗಳೂರು: ಗಾಂಜಾ ಸಾಗಣೆ ಆರೋಪಿತ ಇಬ್ಬರು ಆರೋಪಿಗಳಿಗೆ ನರಸಿಂಹರಾಜಪುರ ತಾಲೂಕು ಜೆಎಂಎಫ್‌ಸಿ ಘನ ನ್ಯಾಯಾಲಯ ಆರು ತಿಂಗಳ ಸಜೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2025 ಫೆ.18ರಂದು ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಿನಕೊಪ್ಪದಿಂದ ಲಕ್ಕಿನಕೊಪ್ಪಕ್ಕೆ ತರಳುವ ಮಾರ್ಗದಲ್ಲಿ ಆರೋಪಿಗಳು ಅಕ್ರಮ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಆರೋಪಿಗಳು ತೆರಳುತ್ತಿದ್ದ ಬೈಕ್ ತಪಾಸಣೆಗೆ ಒಳಪಡಿಸಿದಾಗ 104 ಗ್ರಾಂ. ಗಾಂಜಾ ಪತ್ತೆಯಾಗಿದ್ದು, ಶಿವಮೊಗ್ಗ ಸೂಳೆಬೈಲಿನ ಮಹಮದ್ ಫತಾವುಲ್ಲ ಹಾಗೂ ಭದ್ರಾವತಿ ತಾಲೂಕಿನ ಪೇಪರ್‌ಟೌನ್‌ನ ಪ್ರವೀಣ್ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ದೋಷರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು.

ಆರೋಪಿಗಳ ವಿರುದ್ಧದ ಆರೋಪ ಸಾಭೀತಾದ ಹಿನ್ನಲೆಯಲ್ಲಿ ನರಸಿಂಹರಾಜಪುರ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳಿಬ್ಬರಿಗೂ ಆರು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕೃತ್ಯಕ್ಕೆ ಬಳಸಿದ ಬೈಕನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ವಶಪಡಿಸಿಕೊಂಡಿರುವ ಗಾಂಜಾವನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೇಕ್ಟರ್ ಬಿ.ಎಸ್.ನಿರಂಜನ್‌ಗೌಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸ್ ಸಬ್ ಇನ್ಸ್‌ಪೇಕ್ಟರ್ ಎನ್.ಜ್ಯೋತಿ ದೋಷರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಗದಿಗೆಪ್ಪ ಜಿ. ನೇಕರ್ ವಾದ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments