Saturday, February 7, 2026
Homeಜಿಲ್ಲಾಸುದ್ದಿರಾಮನಗರ: ಅರ್ಪಿತ ಹರೀಶ್ ಕುಮಾರ್ ರವರಿಗೆ ʼಅನರ್ಘ್ಯ ರತ್ನ ರಾಷ್ಟ್ರೀಯ ಪ್ರಶಸ್ತಿʼ ಪ್ರಧಾನ

ರಾಮನಗರ: ಅರ್ಪಿತ ಹರೀಶ್ ಕುಮಾರ್ ರವರಿಗೆ ʼಅನರ್ಘ್ಯ ರತ್ನ ರಾಷ್ಟ್ರೀಯ ಪ್ರಶಸ್ತಿʼ ಪ್ರಧಾನ

ಜ್ಞಾನ ಸರೋವರ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಕೋಟೆ ಚನ್ನಪಟ್ಟಣ ಮತ್ತು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ದಳ ಕೇಂದ್ರ ಕಚೇರಿ ದೆಹಲಿ ರವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆಯ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿವರ್ತನಾ ಕಾರ್ಯಕ್ರಮ ಜರುಗಿತು ಸಮಾರಂಭದಲ್ಲಿ ಅರ್ಪಿತ ಹರೀಶ್ ಕುಮಾರ್ ರವರ ಸಮಾಜ ಸೇವೆ ಹಾಗೂ ಗ್ರಾಮೀಣ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಇತ್ತೀಚೆಗೆ ಜ್ಞಾನ ಸರೋವರ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಕೋಟೆ ಚನ್ನಪಟ್ಟಣ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅರ್ಪಿತ ಹರೀಶ್ ಕುಮಾರ್‌ ಅವರು 2016ರಲ್ಲಿ ವಕೀಲರಾಗಿ ನೋಂದಣಿಯಾಗಿ ರಾಮನಗರ ಮತ್ತು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ವೃತ್ತಿ ನಡೆಸುತ್ತಿದ್ದು, ತಮ್ಮ ಗ್ರಾಮದ ಹಲವು ಸಾರ್ವಜನಿಕ ಸಮಸ್ಯೆಗಳಿಗೆ ಸ್ವತಹ ನ್ಯಾಯಾಲಯದಲ್ಲಿ ಯಾವುದೇ ಶುಲ್ಕ ಪಡೆಯದೆ ಪ್ರಕರಣ ದಾಖಲಿಸಿ ಗ್ರಾಮದ ಶಾಲಾ ಮೈದಾನ, ಸ್ಮಶಾಣಗಳ ಒತ್ತುವರಿ ತೆರವುಮಾಡಿಸಿ ಸಾರ್ವಜನಿಕರಿಗೆ ಅನುಕೂಲ ವಾಗುವ ಕಾರ್ಯ ನಿರ್ವಹಿಸಿದ್ದ ಇವರನ್ನು ಸ್ಥಳೀಯ ಗ್ರಾಮಸ್ಥರು ರಾಮನಗರ ತಾಲ್ಲೂಕು ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಗೆ 2020ನೇ ಇಸವಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ತಂದು ಮನಮಾನಹಳ್ಳಿ ಕ್ಷೇತ್ರದಿಂದ ಅತ್ಯಂತ ಬಹುಮತದೊಂದಿಗೆ ಚುನಾಯಿತರನ್ನಾಗಿ ಮಾಡಿರುತ್ತಾರೆ.

ಇವರು ಗ್ರಾಮ ಪಂಚಾಯಿತಿಯಲ್ಲಿನ ಅನುದಾನ ಸದ್ಬಳಕೆ ಮಾಡಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಕಾನೂನು ಪದವಿದಾರರಾದ ಇವರು 2023ನೇ ಆಗಸ್ಟ್ ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾಗಿ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಗ್ರಾಮ ಪಂಚಾಯಿತಿಯ 21 ಹಳ್ಳಿಗಳ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ವಾರ್ಡ್ ಸಭೆಗಳ ಮೂಲಕ ಪ್ರತಿ ಗ್ರಾಮಕ್ಕೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಸಮಾಲೋಚಿಸಿ 15ನೇ ಹಣಕಾಸು ಮತ್ತು ಸ್ವಂತ ಸಂಪನ್ಮೂಲದೊಂದಿಗೆ ಕ್ರೀಯಾಯೋಜನೆ ರೂಪಿಸಿ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮನೆ ಮನೆಗೆ ಇ ಖಾತಾ ಆಂದೋಲನದ ಮೂಲಕ ಗ್ರಾಮದ ಮನೆಗಳಿಗೆ ಖುದ್ದು ಇ ಖಾತೆ ಮಾಡಿಕೊಡುವ ಮೂಲಕ ಜನ ಸ್ನೇಹಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ತಂಬಾಕು ಮುಕ್ತ ಗ್ರಾಮ ಪಂಚಾಯಿತಿ ಮಾಡಬೇಕೆಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ಪಂಚಾಯಿತಿ ವ್ಯಾಪ್ತಿಯ 21 ಹಳ್ಳಿಗಳಿಗೆ ಆರೋಗ್ಯ ಕೇಂದ್ರದ ಸಿಬ್ಬಂದಿ, ಪೊಲೀಸ್ ಮತ್ತು ಪಿ.ಡಿ.ಓ ಗಳೊಂದಿಗೆ ಭೇಟಿನೀಡಿ ಕೋಪ್ಟಾ ಕಾಯ್ದೆಯಂತೆ ತಂಬಾಕು ಪದಾರ್ಥ ಮಾರಾಟ ಮಾಡುತ್ತಿದ್ದ ಅಂಗಡಿಗೆ ದಾಳಿ ನಡೆಸಿ, ಅಲ್ಲಿನ ತಂಬಾಕು ವ್ಯಸನಿಗಳಿಗೆ ಹಲವಾರು ಮನಪರಿವರ್ತನೆ ಕಾರ್ಯಕ್ರಮಗಳನ್ನು ಮಾನಸಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿ ಹಲವರು ತಂಬಾಕು ವ್ಯಸನಿಗಳು ತಂಬಾಕು ತ್ಯಜಿಸಿ, ಅಂಗಡಿಯವರು ತಂಬಾಕು ಉತ್ಪನ್ನ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ, ಇವರ ಕಾರ್ಯಕ್ರಮಗಳನ್ನು ಅಮೆರಿಕ ದೇಶದ ನ್ಯೂಯಾರ್ಕ ಪ್ರತಿನಿಧಿ ಡಾ.ಆಶೀಶ್ ಮತ್ತು ವೈಟಲ್ ಸ್ಟ್ಯಾಟಜ್ರಿಸ್ ತಂಡ ಭೇಟಿ ನೀಡಿ ತಂಬಾಕು ಮುಕ್ತ ಗ್ರಾಮ ಪಂಚಾಯಿತಿ ಅನುಷ್ಠಾನ ಕುರಿತ ಮಾಹಿತಿ ಸಂಗ್ರಹಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಸಲ್ಲಿಸಿದ್ದರ ನಿಮಿತ್ತ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಗೆ W.H.O ಯಿಂದ ಪ್ರಶಸ್ತಿ ಕೂಡ ಲಭಿಸಿದೆ, ಗ್ರಾಮ ಪಂಚಾಯಿತಿಯ ಆರೋಗ್ಯ ಕೇಂದ್ರ ನವೀಕರಣ ಕುರಿತು ಇಲ್ಲಿನ ಸ್ಥಳೀಯ ಶಾಸಕರು ಮತ್ತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಅನುದಾನ ಬಿಡುಗಡೆ ಮಾಡಿಸಿ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಲು ಸಹಕಾರಿಯಾಗಿದ್ದಾರೆ.

ಸರ್ಕಾರದಿಂದ ಕೆ.ಪಿ.ಎಸ್ ಶಾಲೆ ಮಂಜೂರು ಮಾಡಿಸಲು ಯಶಸ್ವಿಯಾಗಿದ್ದಾರೆ, ಇವರು ಪ್ರಸ್ತುತ ತಾಲ್ಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾಗಿ ಮತ್ತು ರಾಮನಗರ ಸರ್ಕಾರಿ ಕಾನೂನು ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ರೋಟರಿ ಸಿಲ್ಕ್ ಸಿಟಿ ನಿರ್ದೇಶಕರಾಗಿ ಹಲವು ಸಾರ್ವಜನಿಕ ಸೇವೆಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರಿಗೆ ಪ್ರಶಸ್ತಿ ಅನರ್ಘ್ಯ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಶಿವಶಂಕರ್.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾನೂನು ಸಲಹೆಗಾರರಾದ ಸುರೇಶ್.ಎನ್, ಕಾರ್ಯದರ್ಶಿಗಳಾದ ಭಾಸ್ಕರ್ ಎಂ.ಆರ್, ಸದಸ್ಯರಾದ ಲಕ್ಷ್ಮಿ ಮೂರ್ತಿ, ಮಾಧವಮೂರ್ತಿ, ಭರತನಾಟ್ಯ ಕಲಾವಿದೆ ವಿದ್ಯಾ.ಎಂ, ಕಾಲೇಜು ಅಧ್ಯಕ್ಷರಾದ ರಾಹುಲ್ ರಾಜೆ ಅರಸ್, ಅತಿಥಿಗಳಾದ ಸಂಚಾರ ನಿರೀಕ್ಷಕರಾದ ಬಸವರಾಜು, ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!