Sunday, August 9, 2026
Homeಇತರೆಶೃಂಗೇರಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ: ಮಂಟಪದಿಂದ ಹೊರ ನಡೆದ ವಧು!

ಶೃಂಗೇರಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ: ಮಂಟಪದಿಂದ ಹೊರ ನಡೆದ ವಧು!

Telegram Group
Join Now

ಶೃಂಗೇರಿ: ತಾಳಿ ಕಟ್ಟುವ ವೇಳೆ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ನಡೆದಿದೆ.

ಹೌದು .. 41 ವರ್ಷದ ವರ ದೀಕ್ಷಿತ್ ಹೆಗ್ಡೆ ಹಾಗೂ 29 ವಯಸ್ಸಿನ ಹುಡುಗಿ ಜೊತೆ ವಿವಾಹ ನಿಶ್ಚಯವಾಗಿದ್ದು ಇಂದು ಶೃಂಗೇರಿ ಈಡಿಗ ಸಮುದಾಯ ಭವನದಲ್ಲಿ ನಡೆಯಬೇಕಿತ್ತು. ಆದರೆ ಕಲ್ಯಾಣ ಮಂಟಪದಲ್ಲಿ ಹುಡುಗನ ಬಗ್ಗೆ ಅಪರಿಚಿತರು ಬರೆದಿರೋ ಪತ್ರವನ್ನು ನೋಡಿ ಮದುವೆಯನ್ನು ಕ್ಯಾನ್ಸಲ್‌ ಮಾಡಿಕೊಂಡು ಹೊರಟು ಹೋಗಿದ್ದಾಳೆ.

ಪೊಲೀಸ್ ಕೇಸ್, ಸುಳ್ಳು ವಯಸ್ಸು ಹೇಳಿ ಮದ್ವೆ ಆಗ್ತಿದ್ದಾನೆ ಎಂದು ಅಪರಿಚಿತರಿಂದ ಐದು ಪುಟಗಳ ದೂರು ಇರುವ ಪತ್ರವೊಂದು ಹುಡುಗಿಯ ಕೈ ಸೇರಿತ್ತು ಈ ಹಿನ್ನೆಲೆಯಲ್ಲಿ ನನ್ನ ಹತ್ತಿರ ವಯಸ್ಸು, ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿರುವುದರ ಬಗ್ಗೆ ಹಾಗೂ ತಾಯಿಯ ಅನಾರೋಗ್ಯ ವಿಷಯವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದ್ದಾಳೆ.

ಸ್ಥಳಕ್ಕೆ ಸಿಡಿಪಿಒ, ಪೊಲೀಸರು ಬಂದು ಎಷ್ಟೇ ಮನವೊಲಿಕೆ ಮಾಡಿದರೂ ಹುಡುಗಿ ಒಪ್ಪದೇ ಏನೇ ಆದ್ರೂ ಮದುವೆ ಮಾಡಿಕೊಳ್ಳಲ್ಲವೆಂದು ಹೊರಟು ಹೋಗಿದ್ದಾಳೆ.

ಇದು ವರನಿಗೆ ಮೊದಲ ಮದುವೆಯಾಗಿದ್ದು, ವಧುವಿಗೆ ಎರಡನೇ ಮದುವೆಯಾಗಿರುತ್ತದೆ. ಹಾಗೆ ಒಂಬತ್ತು ವರ್ಷದ ಮಗ ಸಹ ಇರುತ್ತಾನೆ. ಈ ವಿಚಿತ್ರ ಪ್ರಕರಣವು ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments