Monday, March 9, 2026
Homeಇತರೆಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವು!

ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವು!

ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಮುಂಜಾನೆ ನಡೆದಿದೆ.

ದೇವಾನಂದ್ (42) ಮೃತಪಟ್ಟ ದುರ್ದೈವಿ. ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಾನಂದ್‌ಗೆ ಇಂದು ಮುಂಜಾನೆ ಮಲಗಿದ್ದ ವೇಳೆಯೇ ಹೃದಯಾಘಾತವಾಗಿದೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಿ ದೇವಾನಂದ್ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ದೇವಾನಂದ್ ಹಲವಾರು ಬಾರಿ ಪೌರಾಣಿಕ ನಾಟಕಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಾಯಿ, ಮಡದಿ, ಇಬ್ಬರು ಮಕ್ಕಳನ್ನು ದೇವಾನಂದ್ ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!