Wednesday, July 15, 2026
Homeಜಿಲ್ಲಾಸುದ್ದಿಬಣಕಲ್ ಶಾಲೆಗೆ ಆಡಿ ಕಲಿತು ನಲಿದ ಹಳೆಯ ವಿದ್ಯಾರ್ಥಿಗಳ ಆತ್ಮೀಯ ಭೇಟಿ

ಬಣಕಲ್ ಶಾಲೆಗೆ ಆಡಿ ಕಲಿತು ನಲಿದ ಹಳೆಯ ವಿದ್ಯಾರ್ಥಿಗಳ ಆತ್ಮೀಯ ಭೇಟಿ

Telegram Group
Join Now

ಕೊಟ್ಟಿಗೆಹಾರ : ಬಣಕಲ್ ಪ್ರೌಢಶಾಲೆಯ 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮದ ಮುನ್ನೋಟವಾಗಿ ಸರಳ ಹಾಗೂ ಆತ್ಮೀಯವಾಗಿ ಒಂದಾಗಿ ಸೇರಿದರು.

ಈ ಸಂದರ್ಭದಲ್ಲಿ ಭಾಗವಹಿಸಿ, ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿ ಸಂತೋಷದಿಂದ ಶಿಕ್ಷಕರನ್ನು ಭೇಟಿಯಾದರು. ಮುಂದಿನ ಪುನರ್ಮಿಲನ ಕಾರ್ಯಕ್ರಮದ ಬಗ್ಗೆ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಹಾಗೂ ಶಿಕ್ಷಕ ವೃಂದದವರೊಂದಿಗೆ ಚರ್ಚೆ ನಡೆಸಿ, ಎಲ್ಲರಿಗೂ ಅನುಕೂಲವಾಗುವ ಸಮಯದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ನಂತರ ತಮ್ಮ ಹಳೆಯ ತರಗತಿಯಲ್ಲಿ ಕೆಲಕಾಲ ಕಳೆಯುತ್ತಾ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ಬಳಿಕ ಉಪಹಾರ ಸೇವಿಸಿ, ಕೊನೆಯಲ್ಲಿ ಸ್ನೇಹಭಾವದಿಂದ ಕ್ರಿಕೆಟ್ ಆಟವಾಡಿ ಕಾರ್ಯಕ್ರಮವನ್ನು ಸಂತೋಷದಿಂದ ಅವರವರ ಮನೆಗೆ ನಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments