ಮೂಡಿಗೆರೆ: ಭೂಗರ್ಭಕ್ಕೆ ಕೊಳ್ಳಿ ಇಟ್ಟ ಅಷ್ಟಲಕ್ಷ್ಮಿ ಎಸ್ಟೇಟ್ ಕಿರಾತಕರ ವಿರುದ್ಧ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲು ಹಸಿರು ಫೌಂಡೇಶನ್ ನಿರ್ಧರಿಸಿದೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಊರುಬಗೆ ಸರ್ವೇ ನಂಬರ್ 280ರಲ್ಲಿ ದೊಡ್ಡ ಮಟ್ಟದಲ್ಲಿ ಅರಣ್ಯ ನಾಶ ಆಗಿದೆ. ಗುಡ್ಡಗಳನ್ನ ಅಗೆದು ಬಗೆದು ಹತ್ತಾರು ಕಿಲೋಮೀಟರ್ ಅಕ್ರಮವಾಗಿ ಕಚ್ಚಾ ರಸ್ತೆಗಳನ್ನ ನಿರ್ಮಾಣ ಮಾಡಲಾಗಿದೆ. ಹೀಗೆ ರಸ್ತೆ ಮಾಡಲು ಜೆಸಿಬಿ, ಹಿಟಾಚಿ ಸೇರಿದಂತೆ ದೊಡ್ಡ ದೊಡ್ಡ ಅಡ್ವಾನ್ಸ್ ಪರಿಕರಣಗಳನ್ನ ಬಳಸಲಾಗಿದೆ. ಸಾವಿರಾರು ಮರಗಳನ್ನ ಕಡಿದು ಸಾಗಿಸಲಾಗಿದೆ.
ನಿಷೇಧಿತ ಸ್ರ್ಪೇ ಹೊಡೆದು ಕಾಡುಪ್ರಾಣಿಗಳ ಮಾರಣ ಹೋಮ ಮಾಡಲಾಗಿದೆ. ಹೀಗೆ ಪಶ್ಚಿಮ ಘಟ್ಟದ ಸೂಕ್ಷ್ಮ ವಲಯ ಪ್ರದೇಶದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅರಣ್ಯ ನಾಶ ಎಸಗಿದ್ರೂ ಅರಣ್ಯ ಇಲಾಖೆ ಮಾತ್ರ ಜಾಣಮೌನವನ್ನ ತಾಳುತ್ತಿರೋದು ಪ್ರಜ್ಞಾವಂತ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯವಾಗಿ ಅಷ್ಟಲಕ್ಷ್ಮಿ ಎಸ್ಟೇಟ್ ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರೋ ಅಧಿಕಾರಿಗಳು, ಆರೋಪಿಗಳ ಮೇಲೆ ನಾನ್ ಬೇಲೇಬಲ್ ಕೇಸುಗಳನ್ನ ಹಾಕಿ ಸುಲಭವಾಗಿ ಕಿರಾತಕರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳೊಕೆ ಸಹಕಾರ ನೀಡಿದ್ದಾರೆ ಅಂತಾ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ನಿಮ್ಮ ಪ್ರತಾಪ ಏನಿದ್ರೂ ಬಡಪಾಯಿಗಳ ಮೇಲೆ ಅದನ್ನ ಬಿಟ್ಟು ಪರಿಸರದ ಮೇಲೆ ಬೆಲೆಕಟ್ಟಲಾಗದಷ್ಟು ಅನಾಚಾರ ಮಾಡಿರೋ ಕಿರಾತಕರ ಮೇಲಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಇಂಪ್ಯಾಕ್ಟ್ ಸ್ಥಳಕ್ಕೆ ಹೋಗಿ ಗ್ರೌಂಡ್ ರಿಪೋರ್ಟ್ ಮಾಡುವ ಕೆಲಸವನ್ನ ಮಾಡಿತ್ತು. ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದ ಮೇಲೆ ಯಾವ ರೀತಿ ಅನಾಚಾರ ಮಾಡಲಾಗಿದೆ, ಭೂಗರ್ಭಕ್ಕೆ ಕಿರಾತಕರು ಯಾವ ರೀತಿ ಕೊಳ್ಳಿ ಇಟ್ಟಿದ್ದಾರೆ ಎಲ್ಲವನ್ನೂ ತೋರಿಸಲಾಗಿತ್ತು.. ಆದರೆ, ಹೆತ್ತ ತಾಯಿಗೆ ದ್ರೋಹ ಮಾಡಿದ ಖದೀಮರ ರಕ್ಷಣೆಗೆ ಇಳಿದಿರುವ ಇಲಾಖೆಯ ದ್ವಂದ್ವ ನೀತಿ ಸಾರ್ವಜನಿಕವಾಗಿ ಬೆತ್ತಲಾಗಿದ್ದು, ಜನರು ಛೀ.ಥೂ ಅಂತಾ ಹೇಸಿಗೆ ಪಡುವಷ್ಟು ಅಸಹ್ಯ ಸ್ಥಿತಿಗೆ ಬಂದಿರೋದು ನಿಜಕ್ಕೂ ಅಘಾತಕಾರಿ ವಿಚಾರವೇ ಸರಿ.
ಇನ್ನೂ ಇದಕ್ಕೆ ಸಂಬಂಧಿಸಿದಂತೆ ಹಸಿರು ಫೌಂಡೇಶನ್, ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದೆ.
