ಚಿಕ್ಕಮಗಳೂರು: ಕರ್ತವ್ಯ ನಿರತ ಶೃಂಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ.
2017 ರ ಬ್ಯಾಚ್‌ನ ಸತೀಶ್ ಆಚಾರ್ ಮೃತ ಪೊಲೀಸ್ ಅಧಿಕಾರಿಯಾಗಿದ್ದು ಶೃಂಗೇರಿ ಪೊಲೀಸ್ ಠಾಣೆಯ ರಾತ್ರಿಪಾಳಯದ 112 ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಕೇಸ್ ನಿಮಿತ್ತ ಹರಿಹರಪುರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದ್ದು,ತಕ್ಷಣ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸತೀಶ್‌ರನ್ನು ಸಹಸಿಬ್ಬಂದಿ ದಾಖಲಿಸಿದ್ದಾರೆ ಆದರೆ ಆಸ್ಪತ್ರೆ ವೈದ್ಯರು ಸತೀಶ್ ರವರು ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ.
ಮೃತರು ಪತ್ನಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದು,ಇವರು ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾ ಪಂ ವ್ಯಾಪ್ತಿಯ ಗಂಡಘಟ್ಟ ಮೂಲದವರು ಹಾಗೂ ಮಾಜಿ ಸೈನಿಕರಾಗಿದ್ದರು.ಸದ್ಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನದಿಂದ ಸಹೋದ್ಯೋಗಿಗಳು ಹಾಗೂ ಪೊಲೀಸ್ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೃತರ ನಿಧನಕ್ಕೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.
