ಬಾಳೆಹೊನ್ನೂರು: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲು ತೋರಿರುವ ಮುತ್ಸದ್ದಿತನ ಮೆಚ್ಚಬೇಕು ಹಾಗೆ ಡಿಕೆಶಿ ಸಿಎಂ ಆಗಿ ಒಳ್ಳೆಯ ಆಡಳಿತ ನಡೆಸಲಿ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಬಾಳೆಹೊನ್ನೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, 2023ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಅಧ್ಯಕ್ಷರು ಸಿಎಂ ಆಗೋದು ವಾಡಿಕೆ. ಹೈಕಮಾಂಡ್ ಅನುಭವಿ ಸಿದ್ದರಾಮಯ್ಯನವರಿಗೆ ಮೊದಲ ಅವಕಾಶ ನೀಡಿತ್ತು. 5 ವರ್ಷದಲ್ಲಿ ಇಬ್ಬರು ಎರಡೂವರೆ ವರ್ಷ ಅಂತ ನಿರ್ಣಯ ಮಾಡಿದ್ರು. ಡಿಕೆಶಿ ತಾಳ್ಮೆ-ಸಹನೆ ಕಳೆದುಕೊಳ್ಳದೆ ಗಂಗಾಧರ ಜಗ್ಗುರುಗಳ ಮೇಲೆ ನಂಬಿಕೆ ಇಟ್ಟಿದ್ದರು ಎಂದರು.
ಸಿದ್ದರಾಮಯ್ಯನವರು ಉದಾರ ಅಂತಕರಣದಿಂದ ಆ ಸ್ಥಾನ ಬಿಟ್ಟುಕೊಡುವ ಮೂಲಕ ತೋರಿರುವ ಮುತ್ಸದ್ದಿತನವನ್ನ ಎಲ್ಲರೂ ಮೆಚ್ಚಬೇಕು. ಡಿಕೆಶಿ ಸಿಎಂ ಆಗಿ ಒಳ್ಳೆಯ ಆಡಳಿತ ನಡೆಸಲಿ. ಜಾತಿ-ಧರ್ಮದ ಸಂಘರ್ಷಗಳ ಸಂದರ್ಭ ಬರಬಾರದು. ಎಲ್ಲಾ ಸಮುದಾಯದ ಜನರನ್ನ ಮೇಲೆತ್ತುವ ಕಾರ್ಯ ಆಗಬೇಕು. ಇತ್ತೀಚಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗಿದೆ.
ಯಾವುದೇ ಜಾತಿ-ಧರ್ಮ ಇರಲಿ ಸಮವಸ್ತ್ರ ಎಂದು ಶಾಲೆಯ ಶಿಸ್ತು ನಿಯಮವನ್ನ ಪರಿಪಾಲಿಸಿಕೊಂಡು ಬಂದ ದಿನಗಳಿದ್ದವು. ಇಂದು ಓದುವ ಮಕ್ಕಳಲ್ಲೂ ಜಾತಿಯ ಭಾವನೆ ಬೆಳೆಸುವ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಧರ್ಮಪೀಠಕ್ಕೂ ಇದರಿಂದ ಬಹಳ ನೋವಾಗಿದೆ, ಅದು ಆಗಬಾರದು.
