Thursday, July 16, 2026
Homeಕ್ರೈಮ್ಜಯಪುರ : ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು

ಜಯಪುರ : ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು

Telegram Group
Join Now

ಕೊಪ್ಪ ತಾಲೂಕಿನ ಕುಳೂರು ಗ್ರಾಮದ ಬೈಲುಕೊಪ್ಪ ನಿವಾಸಿ ವೀಣಾ ಚಂದ್ರಶೇಖರ್ ಮನೆಯಲ್ಲಿ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.

ಬುಧವಾರ ಬೆಳಿಗ್ಗೆ ವೀಣಾ ತನ್ನ ಮಗನನ್ನು ಶೃಂಗೇರಿ ಕಾಲೇಜಿಗೆ ಪ್ರವೇಶಾತಿ ಪಡೆಯಲು ಕರೆದುಕೊಂಡು ಹೋಗಿದ್ದು ನಂತರ ಅವರ ಗಂಡ ಹಾಗೂ ಇನ್ನೊಬ್ಬ ಮಗ ವೈಯಕ್ತಿಕ ಕೆಲಸದ ಮೇಲೆ ಜಯಪುರಕ್ಕೆ ತೆರಳಿದ್ದು ಆ ಸಮಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಮದ್ಯಾಹ್ನದ ವೇಳೆಗೆ ವೀಣಾ ಅವರ ಮಗ ಮನೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲು ಬೀಗ ಮುರಿದು ಬಿದಿದ್ದು ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ.

ಕಳ್ಳರು ಮನೆ ಒಳಗೆ ನುಗ್ಗಿ ಗಾಡ್ರೆಜ್ ಬೀರುವಿನಲ್ಲಿ ಇದ್ದ ಮೂರು ಪರ್ಸ್ ನಲ್ಲಿ ಅಂದಾಜು 1,95,000 ಲಕ್ಷ ಬೆಲೆಬಾಳುವ ಚಿನ್ನದ ತಾಳಿ ಸರ, 20ಗ್ರಾಂ ತೂಕದ ಅಂದಾಜು 4000 ಬೆಲೆ ಬಾಳುವ ಬೆಳ್ಳಿಯ ಬ್ರಾಸ್ ಲೈಟ್ ಹಾಗೂ ನಗದು 5000 ಹಣ ಒಟ್ಟು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಜಯಪುರ ಪೊಲೀಸ್ ಠಾಣಾ ಅಧಿಕಾರಿ ಪಿ.ಎಸ್.ಐ ರವೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಈ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸ್ಥಳೀಯ ನಿವಾಸಿಗಳು ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಸ್ಥಳೀಯ ಬೀಟ್ ಪೊಲೀಸ್ಗೆ ಮಾಹಿತಿ ನೀಡಬೇಕು ಎಂದು ಪಿ ಎಸ್ ಐ ರವೀಶ್ ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments