Wednesday, June 10, 2026
Homeಜಿಲ್ಲಾಸುದ್ದಿಕೊಪ್ಪ: ಮಾವಿನಕಟ್ಟೆಯ ಸುತ್ತಮುತ್ತಲಿನ ಬಹುದಿನದ ಕನಸು ನನಸು: ಓಣಿತೋಟ ರತ್ನಾಕರ್

ಕೊಪ್ಪ: ಮಾವಿನಕಟ್ಟೆಯ ಸುತ್ತಮುತ್ತಲಿನ ಬಹುದಿನದ ಕನಸು ನನಸು: ಓಣಿತೋಟ ರತ್ನಾಕರ್

ಕೊಪ್ಪ: ಕೊಪ್ಪದಿಂದ ಶಾನುವಳ್ಳಿಗೆ  ಸರ್ಕಾರಿ ಬಸ್ಸಿಲ್ಲದೇ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಅಲ್ಲಿನ ಸ್ಥಳೀಯರು ಪರದಾಟ ಅನುಭವಿಸುತ್ತಿದ್ದರು ಇದೀಗ ಬಸ್ಸಿನ ವ್ಯವಸ್ಥೆ ಕಲ್ಪಿಸಿರುವುದು ಮಾವಿನಕೆಟ್ಟೆಯ ಸುತ್ತಮುತ್ತಲಿನ ಬಹುದಿನದ ಕನಸು ನನಸಾಗಿದೆ ಎಂದು  ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.

ಹೌದು.. ಬೆಳಗ್ಗೆ 7.15 ಕ್ಕೆ ಕೊಪ್ಪದಿಂದ ಬಿಟ್ಟು 7.45 ಕ್ಕೆ ಶಾನುವಳ್ಳಿಗೆ ತಲುಪುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸು 8.50ಕ್ಕೆ ಮಾವಿನಕಟ್ಟೆ ಗೆ ತಲುಪಿ ಅಲ್ಲಿಂದ ವಾಪಾಸ್ ಶಾನುವಾಳ್ಳಿಗೆ ಬಂದು ಶೃಂಗೇರಿ, ಜೈಪುರ ಮಾರ್ಗವಾಗಿ, ಕಡೂರು ತಲುಪುತ್ತದೆ. ಸಂಜೆ 5.45ಕ್ಕೆ ಶೃಂಗೇರಿ ಇಂದ ಶಾನುವಳ್ಳಿ ತಲುಪಿ ಮಾವಿನಕಟ್ಟೆಗೆ ಹೋಗಿ 6 ಗಂಟೆಗೆ ಮಾವಿನಕಟ್ಟೆ ಇಂದ ನಿಲುವಾಗಿಲು ಮಾರ್ಗವಾಗಿ ಕೊಪ್ಪ ತಲುಪುತ್ತದೆ.

ಈ ಬಸ್ಸಿನ ವ್ಯವಸ್ಥೆಯನ್ನು ಕೊಪ್ಪ ತಾಲ್ಲೂಕು ಗ್ಯಾರಂಟಿ ಯೋಜನೆಯ ಮಾನವೀಯ ಮೇರೆಗೆ ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ.ಡಿ. ರಾಜೇಗೌಡರವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಂ.ಸಿ. ಶಿವಾನಂದ ಸ್ವಾಮೀಯವರು ಹಾಗೂ ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ಡಿಪೋ ಅವರ ಸಹಕಾರದಿಂದ ಮಾವಿನಕಟ್ಟೆಯ ಸುತ್ತ ಮುತ್ತಲಿನ ಜನತೆಯ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.

ಜೂನ್‌ 9ರಂದು ಮಂಗಳವಾರದಿಂದ ಸಂಜೆ 6.00 ಗಂಟೆಗೆ ಕ್ಷೇತ್ರದ ಶಾಸಕರಾದ ಟಿ. ಡಿ. ರಾಜೇಗೌಡರು, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಾನಂದ ಸ್ವಾಮಿಯವರು ಚಾಲನೆ ನೀಡಲಿದ್ದಾರೆ.ಇದರಿಂದ ಮಾವಿನಕೆಟ್ಟೆಯ ಸುತ್ತಮುತ್ತಲಿನ ಬಹುದಿನದ ಕನಸು ನನಸಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!