Sunday, July 26, 2026
Homeಜಿಲ್ಲಾಸುದ್ದಿPhoto Today: ಫೋಟೋ ಟುಡೇ’ ಪ್ರದರ್ಶನ: ಚಿಕ್ಕಮಗಳೂರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ

Photo Today: ಫೋಟೋ ಟುಡೇ’ ಪ್ರದರ್ಶನ: ಚಿಕ್ಕಮಗಳೂರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ

Telegram Group
Join Now

ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ವಸ್ತು ಪ್ರದರ್ಶನದ (Photo Today) ಭಿತ್ತಿಪತ್ರವನ್ನು ಚಿಕ್ಕಮಗಳೂರಿನ ಶಾಸಕರಾದ ಹೆಚ್.ಡಿ. ತಮ್ಮಯ್ಯನವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಜಿಲ್ಲಾ ಕಾರ್ಯನಿರತ ಛಾಯಾಗ್ರಾಹಕರ ಸಂಘ ಹಾಗೂ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದ ಜಂಟಿ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಗಳೂರಿನ ಛಾಯಾಗ್ರಾಹಕರ ಸಮ್ಮುಖದಲ್ಲಿ ಬಿತ್ತಿಪತ್ರ ಬಿಡುಗಡೆ ಮಾಡಿದ ಶಾಸಕರು, ಕಾರ್ಯಕ್ರಮಕ್ಕೆ ಮತ್ತು ಜಿಲ್ಲೆಯ ಛಾಯಾಗ್ರಾಹಕರಿಗೆ ಶುಭ ಹಾರೈಸಿದರು.

ಈ ಪ್ರಮುಖ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರೇಣುಕಪ್ಪ ಹಾಗೂ ತಾಲೂಕು ಅಧ್ಯಕ್ಷರಾದ ನದೀಮ್ ಪಾಷಾ ಪ್ರಮುಖವಾಗಿ ಉಪಸ್ಥಿತರಿದ್ದರು. ಅವರೊಂದಿಗೆ ಜಿಲ್ಲೆಯ ಹಿರಿಯ ಹಾಗೂ ಯುವ ಛಾಯಾಗ್ರಾಹಕರಾದ ರಮೇಶ್, ವಿನಯ್ ಸಿ.ಡಿ, ಸುರೇಶ್ ನವೀನ್, ಶಿವಕುಮಾರ್, ರವಿ ಕುಮಾರ್, ಹರೀಶ್, ಜಯನಾಯಕ್, ಪ್ರಭು, ಕೌಶಿಕ್, ಸಂತೋಷ್, ನಿತಿನ್, ರಂಜಿತ್ ಮತ್ತು ರಾಹುಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ರಂಗದ ಮುಂಚೂಣಿ ಛಾಯಾಗ್ರಾಹಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments