Thursday, July 2, 2026
Homeಇತ್ತೀಚಿನ ಸುದ್ದಿBaby Care center: ಬೇಬಿ ಕೇರ್​​ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ: ಐವರು ಸಿಬ್ಬಂದಿ ವಿರುದ್ಧ...

Baby Care center: ಬೇಬಿ ಕೇರ್​​ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ: ಐವರು ಸಿಬ್ಬಂದಿ ವಿರುದ್ಧ ಎಫ್‌ಐಆರ್

Telegram Group
Join Now

ಬೆಂಗಳೂರು: ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಹೆಚ್‌ಎಎಲ್‌ ಪೊಲೀಸರು  ಅಲ್ಲಿನ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

ಹೆಚ್‌ಎಎಲ್‌ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದು, ಇದರ ಜೊತೆಗೆ ಬೇಬಿಕೇರ್ ಮೈಂಟೇನೆನ್ಸ್ ಹಾಗೂ ಕಂಪನಿ ಅಡ್ಮಿನ್ ಡಿಪಾರ್ಟ್ಮೆಂಟ್‌ಗೂ ನೋಟಿಸ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆ ವೇಳೆ ವೈರಲ್ ಆಗಿರುವ ವಿಡಿಯೋ ಹಳೆಯದು ಅನ್ನೋದು ಬೆಳಕಿಗೆ ಬಂದಿದೆ. CAPGEMINI TECHNOLOGY SERVICES ಕಂಪನಿ ಉದ್ಯೋಗಿಗಳಿಗಾಗಿಯೇ ಈ ಬೇಬಿಕೇರ್‌ನ ತೆರಯಲಾಗಿದ್ದು, ಅಲ್ಲಿನ ಕೆಲಸಗಾರರು ಮಕ್ಕಳನ್ನ ಬೇಬಿಕೇರ್‌ನಲ್ಲಿ ಬಿಟ್ಟು ಹೋಗ್ತಿದ್ರು. ಕೆಲಸ ಮುಗಿಸಿಕೊಂಡು ಹೋಗುವಾಗ ಮಕ್ಕಳನ್ನ ವಾಪಸ್ ಕರೆದೊಯ್ಯುತ್ತಿದ್ದರು ಅನ್ನೋದು ಗೊತ್ತಾಗಿದೆ.

ಇನ್ನೂ ಬೇಬಿ ಕೇರ್‌ನಲ್ಲಿ ಕೆಲಸ ಮಾಡೋ ಸಿಬ್ಬಂದಿಯನ್ನು ಕಂಪನಿಯವರೇ ನಿಯೋಜನೆ ಮಾಡಿದ್ದಾರೆ. ಸದ್ಯ 18 ಮಕ್ಕಳು ಬೇಬಿಕೇರ್‌ನಲ್ಲಿ ಇರುತ್ತಿದ್ದು, ಮಕ್ಕಳ ಮೇಲೆ ದೈಹಿಕ ಹಿಂಸೆ ವಿಡಿಯೋ ವೈರಲ್ ಆದ ನಂತರ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments