Friday, July 24, 2026
Homeಕ್ರೈಮ್ತೋಟದಲ್ಲಿ ತೆಂಗಿನಕಾಯಿ ಕದ್ದ ಆರೋಪ: ಹಾಡಹಗಲೇ ಮಹಿಳೆ ಮೇಲೆ ಮನಸ್ಸೋ ಇಚ್ಛೆ ಹಲ್ಲೆ!!

ತೋಟದಲ್ಲಿ ತೆಂಗಿನಕಾಯಿ ಕದ್ದ ಆರೋಪ: ಹಾಡಹಗಲೇ ಮಹಿಳೆ ಮೇಲೆ ಮನಸ್ಸೋ ಇಚ್ಛೆ ಹಲ್ಲೆ!!

Telegram Group
Join Now

ಚಿಕ್ಕಮಗಳೂರು : ತೋಟದಲ್ಲಿ ತೆಂಗಿನಕಾಯಿ ಕದ್ದ ಆರೋಪ ಮೇರೆಗೆ ಮಹಿಳೆ ಮೇಲೆ ಮನಬಂದಂತೆ ಮನಸ್ಸೋ ಇಚ್ಚೆ ಹಲ್ಲೆ ನಡಸಿರುವ ಘಟನೆ ಡೂರು ತಾಲೂಕಿನ ಯಗಟಿ ಸಮೀಪದ ಪಾತೇನಗಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮ್ಮ (32) ಹಲ್ಲೆಗೊಳಗಾದ ಮಹಿಳೆ. ಮೂವರು ಪುರುಷರಿಂದ ಮಹಿಳೆ ಮೇಲೆ ತೀವ್ರ ಹಲ್ಲೆ ನಡೆಸಿದ್ದು  ಗಾಯಾಳು ಶಿವಮ್ಮನನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಾತೇನಹಳ್ಳಿ ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಶಿವಮ್ಮ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ಹೋಗುವಾಗ  ಕೈಯಲ್ಲಿದ್ದ ತೆಂಗಿನಕಾಯಿ ಕಂಡು ನಮ್ಮದ್ದೇ ತೋಟದ್ದು ಹಾಗೆ ನಾನು ಕರೆದಾಗ ಬರುವುದಿಲ್ಲ, ತೆಂಗಿನಕಾಯಿ ತೆಗೆದುಕೊಂಡು ಹೋಗ್ತೀಯಾ ಎಂದು ತೋಟದ ಮಾಲೀಕ ನವೀನ್ ಹಲ್ಲೆ ನಡೆಸಲಾಗಿದೆ.

ಈ ವೇಳೆ ಮಹಿಳೆಯ ಬಟ್ಟೆ ಹರಿದು, ನೆಲಕ್ಕೆ ಹಾಕಿ ತುಳಿದಿರೋ ಆರೋಪ ಕೂಡ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ  ನವೀನ್, ಕಲ್ಲೇಶ್ ಹಾಗೂ ದೀಪು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕೆಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments