ಎನ್. ಆರ್. ಪುರ: ಸೊಪ್ಪು ಕಡಿಯಲು ಮರ ಹತ್ತಿದ ವೇಳೆ ಒಣಗಿದ ಕೊಂಬೆ ಮುರಿದು ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಎನ್ಆರ್ ಪುರ ತಾಲೂಕಿನ ಗಡಿಗೇಶ್ವರದಲ್ಲಿ ನಡೆದಿದೆ.
ಗಡಿಗೇಶ್ವದ ಆಡುವಳ್ಳಿ ಗ್ರಾಮದ ನಿವಾಸಿ ಹರೀಶ್ (47( ಮೃತ ದುರ್ದೈವಿ. ಹರೀಶ್ ಅವರ ಆರೋಗ್ಯ ಸರಿ ಇಲ್ಲದಿದ್ದರೂ ಗಿರಿಜಮ್ಮ ಎಂಬುವವರು ಒತ್ತಾಯಪೂರ್ವಕವಾಗಿ ಮರ ಹತ್ತಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಕಾಡಿನಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಒಣಗಿದ ಕೊಂಬೆ ಮುರಿದು ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ದುರಂತಕ್ಕೆ ಕಾರಣರಾದ ಗಿರಿಜಮ್ಮ ಎಂಬುವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಹರೀಶ್ ಪತ್ನಿ ಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
