ಮೂಡಿಗೆರೆ: ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೇಕನಗದ್ದೆ ಅವರು ಆಯ್ಕೆಯಾಗಿದ್ದಾರೆ.
ಮುಂಬರುವ ಗಣಪತಿ ಉತ್ಸವದ ಕುರಿತು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಇವರನ್ನು ಸಮಿತಿ ಮುಖಂಡರು ನೇಮಕಗೋಳಿಸಿದ್ದಾರೆ. ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದ ಶ್ರೀಯುತ ಭರತ್ ಕನ್ನೇಹಳ್ಳಿ ಅವರ ಸ್ಥಾನಕ್ಕೆ ಸಂತೋಷ ಮೇಕನಗದ್ದೆ ಆಯ್ಕೆಯಾಗಿದ್ದಾರೆ
ಸಮಿತಿಯು ಸಂತೋಷ್ ಅವರ ಧಾರ್ಮಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರಿಂದ ಇವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ತಿಳಿಸಿದೆ
ಸಂತೋಷ್ ಮೇಕನಗದ್ದೆ ಅವರು ಈ ಮೊದಲು ಎಬಿವಿಪಿ, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕೆಂಪೇಗೌಡ ಒಕ್ಕಲಿಗ ವೇದಿಕೆ ಹಾಗೂ ಭಾರತೀಯ ಜನತಾ ಪಕ್ಷಗಳಲ್ಲಿ ಕಳೆದ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಇವರ ಕಾರ್ಯ ವೈಖರಿ ಗುರುತಿಸಿದ ಸಮಿತಿ ಜವಾಬ್ದಾರಿ ಸ್ಥಾನ ನೀಡಿದೆ ಎಂದು ಸಮಿತಿಯ ಅಧ್ಯಕ್ಷ ಅನುಕುಮಾರ್ ತಿಳಿಸಿದ್ದಾರೆ
ಈ ಸಭೆಯಲ್ಲಿ ಎಂ.ಕೆ. ಪ್ರಾಣೇಶ್, ಜಯಂತ್ ಬಿದರಹಳ್ಳಿ, ರಘು ಜನ್ನಾಪುರ, ರಂಜನ್ ಅಜಿತ್ ಕುಮಾರ್, ಮಂಚೇಗೌಡ, ನರೇಂದ್ರ, ವಿಭಾ ಸುಷ್ಮಾ, ವಕೀಲರಾದ ಸಿದ್ದಯ್ಯ ಸೇರಿದಂತೆ ಅನೇಕ ಹಿಂದೂ ಮುಖಂಡರು ಹಾಗೂ ಸುತ್ತಮುತ್ತಲಿನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು
