ಜಯಪುರ: ಮೆಸ್ಕಾಂ, ಜಯಪುರ ಶಾಖೆಯ ಮೇಗುಂದ ಹೋಬಳಿ ವ್ಯಾಪ್ತಿಯಲ್ಲಿ ಬರುವ 11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ, ದಿನಾಂಕ 22.08.2026 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮೇಗುಂದ ಹೋಬಳಿ ವ್ಯಾಪ್ತಿಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ, ಸಾರ್ವಜನಿಕರು ಈ ಅವಧಿಯಲ್ಲಿ ಸಹಕರಿಸಬೇಕಾಗಿ ಹಾಗೂ ವಿದ್ಯುತ್ ವ್ಯತ್ಯಯದಿಂದ ಉಂಟಾಗುವ ಅನಾನುಕೂಲತೆಗೆ ಸಹಕರಿಸಬೇಕಾಗಿ ಎಂದು ಮೆಸ್ಕಾಂ, ಜಯಪುರ ಶಾಖೆಯ ವತಿಯಿಂದ ಕೋರಲಾಗಿದೆ.
ವರದಿ: ಶಶಿ ಬೆತ್ತದಕೊಳಲು
