Thursday, October 1, 2026
Homeಜಿಲ್ಲಾಸುದ್ದಿ4 ವರ್ಷಗಳಿಂದ ಬರಿಗಾಲಲ್ಲೇ ಪುಣ್ಯ ಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆಯುವ ಗೀತಾ ಮಾತಾಜಿಗೆ ಕೈ ಮುಗಿದು...

4 ವರ್ಷಗಳಿಂದ ಬರಿಗಾಲಲ್ಲೇ ಪುಣ್ಯ ಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆಯುವ ಗೀತಾ ಮಾತಾಜಿಗೆ ಕೈ ಮುಗಿದು ಅಭಿನಂದನೆ

Telegram Group
Join Now

ಮೂಡಿಗೆರೆ: ಬೆಂಗಳೂರಿನ ನೆಲಮಂಗಲ ಮೂಲದ ಗೀತಾ ಮಾತಾಜಿಯವರು ಕಳೆದ ನಾಲ್ಕು ವರ್ಷಗಳಿಂದ ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡು ದೇಶ-ಧರ್ಮಕ್ಕೆ ಒಳಿತಾಗಲೆಂದು 40 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದಾರೆ.

ಗೀತಾ ಮಾತಾಜಿಯವರ ಈ ಅಪರೂಪದ ಭಕ್ತಿ ಪಯಣಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜನ ಕೂಡ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ. ಗೀತಾ ಮಾತಾಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದರು.

ಜ್ಜೆ ಹೆಜ್ಜೆಯಲ್ಲೂ ಭಕ್ತಿ, ಜೊತೆಯಲ್ಲಿ ಬಾಲಕೃಷ್ಣ ಎಂಬಂತೆ ಸಾಗುತ್ತಿರುವ ಇವರ ಧಾರ್ಮಿಕ ಶ್ರದ್ಧೆ ಹಾಗೂ ಅಚಲ ನಂಬಿಕೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಟ್ಟಿಗೆಹಾರ. ಚಾರ್ಮಾಡಿ ಘಾಟ್ ಮೂಲಕ ಹಾದುಹೋದ ಇವರಿಗೆ ಸ್ಥಳೀಯ ಜನತೆ ಅಪಾರ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.

ಈ ವರ್ಷವೂ ತಮ್ಮ ಭಕ್ತಿಯ ಪಯಣವನ್ನು ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನದತ್ತ ಮುಂದುವರಿಸಿದ್ದಾರೆ. ಈ ಬಾರಿಯ ಪಾದಯಾತ್ರೆಯಲ್ಲಿ ಗೀತಾ ಮಾತಾಜಿ ಅವರೊಂದಿಗೆ ಆಕರ್ಷಿತವಾದ ಬಾಲಕೃಷ್ಣ ಭಕ್ತರ ಗಮನ ಸೆಳೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!