ಕೊಪ್ಪ: ಜಪಾನ್ ನಲ್ಲಿ ಕಂಚಿನ ಪ್ರಶಸ್ತಿ ಗೆದ್ದು ತವರೂರಿಗೆ ಬಂದ ಸ್ನೇಹಾ ಅವರಿಗೆ ಗ್ರಾಮಸ್ಥರೆಲ್ಲ ಸೇರಿ ಸ್ವಾಗತಿಸಿದರು.

ಮಾವಿನಕಟ್ಟೆಯ ಜಟಿಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಶೃಂಗಾರಗೊಳಿಸಿದ ತೆರದ ವಾಹನದಲ್ಲಿ ಮೆರವಣಿಗೆಯೂ ಮಾವಿನಕಟ್ಟೆಯಿಂದ ನಿಲುವಾಗಿಲಿನವರೆಗೂ ಸಾಗಿತು.
ಜಟಿಗೇಶ್ವರ ದೇವಸ್ಥಾನದಲ್ಲಿ ಶೃಂಗೇರಿ ಶಾಸಕರಾದ ಟಿ ಡಿ ರಾಜೇಗೌಡರು ಸ್ನೇಹಾ ಅವರಿಗೆ ತಿಲಕವಿಟ್ಟು ಗೌರವಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು.

“ಹತ್ತೂರ ಸನ್ಮಾನಕ್ಕಿಂತ ಹೆತ್ತೂರ ಸನ್ಮಾನ ವಿಶೇಷ” ಎಂಬ ಮಾತಿದೆ. ತಾವು ಎಷ್ಟೇ ಸಾಧನೆ ಮಾಡಿ ಅದೆಷ್ಟೇ ಪ್ರಶಸ್ತಿ, ಸನ್ಮಾನ ಸ್ವೀಕರಿಸಿದರು. ತಮ್ಮ ಹೆತ್ತೂರಿನಲ್ಲಿ ಸಿಗುವ ಪ್ರೀತಿ, ಕಾಳಜಿ ಮಮತೆಗೆ ಬೇರೆಯದ್ದೆ ಗೌರವವಿರುತ್ತದೆ. ಇಂದು ಗ್ರಾಮಸ್ಥರ ಸ್ವಾಗತ ನೋಡಿ ಸ್ನೇಹಾ ಭಾವುಕರಾದರು.

ಈ ಸಂಧರ್ಭದಲ್ಲಿ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ, ಕೊಪ್ಪ ತಾಲೂಕು ತಹಶೀಲ್ದಾರ್ ಲಿಖಿತಾ ಮೋಹನ್, ಗಣ್ಯರು, ಜನ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.
ವರದಿ: ಶಶಿ ಬೆತ್ತದಕೊಳಲು
