Friday, October 9, 2026
Homeಜಿಲ್ಲಾಸುದ್ದಿಚೆಸ್ ಸ್ಪರ್ಧೆಯಲ್ಲಿ ನಳಂದ ಶಾಲೆಯ ವಿದ್ಯಾರ್ಥಿ ದೇವದತ್ತ ಪ್ರಕಾಶ್ ರಾಜ್ಯ ಮಟ್ಟಕ್ಕೆ ಆಯ್ಕೆ

ಚೆಸ್ ಸ್ಪರ್ಧೆಯಲ್ಲಿ ನಳಂದ ಶಾಲೆಯ ವಿದ್ಯಾರ್ಥಿ ದೇವದತ್ತ ಪ್ರಕಾಶ್ ರಾಜ್ಯ ಮಟ್ಟಕ್ಕೆ ಆಯ್ಕೆ

Telegram Group
Join Now

ಮೂಡಿಗೆರೆ:  2026–27ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಂಗವಾಗಿ, ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಡಿ, ಶೃಂಗೇರಿಯ ಬಿ.ಜಿ.ಎಸ್. ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ನಳಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾದ ಶ್ರೀ ಶಕ್ತಿ ದೇವದತ್ತ ಪ್ರಕಾಶ್ ಅವರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ವಿದ್ಯಾರ್ಥಿಯು ಗಮನಾರ್ಹ ಸಾಧನೆಯಿಂದ ಶಾಲೆಗೆ ಹಾಗೂ ತಮ್ಮ ಪೋಷಕರಿಗೆ ಕೀರ್ತಿ ತಂದಿದ್ದು,ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿ ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!