ಹಾಸನ: ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ, ಇತಿಮಿತಿಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಹಾಸನ ಡಿಸಿ ಲತಾಕುಮಾರಿ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನ ಜಿಲ್ಲಾ ಮಂತ್ರಿಗೆ ಹಾಗೂ ಜಿಲ್ಲಾಧಿಕಾರಿಗೆ ಸಂಘರ್ಷ ಶುರುವಾಗಿದೆ. ಅಧಿಕಾರಿಗಳನ್ನು ಯಾವ ರೀತಿ ಕಂಟ್ರೋಲ್ನಲ್ಲಿ ಇಟ್ಟುಕೊಂಡಿದ್ದೀರಿ? ಸಮನ್ವಯತೆ ನಿರ್ಮಾಣ ಮಾಡಿ ಅಧಿಕಾರ ಮಾಡಬೇಕು. ಆ ಹೆಣ್ಣಮಗಳು ಕೆಪಿಎಸ್ಸಿಯಲ್ಲಿ ಏನು ಮಾಡಿದ್ದರೂ ಅವರನ್ನು ರಜೆ ಮೇಲೆ ಕಳುಹಿಸಬೇಕಿತ್ತು, ಇಲ್ಲಾ ಸಸ್ಪೆಂಡ್ ಮಾಡಬೇಕಿತ್ತು. ಅದು ಬಿಟ್ಟು ಇಲ್ಲಿ ಕರೆದುಕೊಂಡು ಬಂದು ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದಾರೆ. ರಕ್ಷಣೆ ಕೊಟ್ಟು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ಆದರೆ ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ, ಇತಿಮಿತಿಲಿ ಕೆಲಸ ಮಾಡಬೇಕು ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈಗ ಎಸ್ಪಿಗೆ ನೋಟಿಸ್ ಕೊಡ್ತಾರೆ ಎಂದರೆ ಅವರಿಗೆ ಜವಾಬ್ದಾರಿ ಇಲ್ವಾ? ಡಿಸಿ ಏನೇನು ಮಾಡಿದ್ದಾರೆ ಬಂಡವಾಳ ನಾನು ತೆಗೆಯಬಹುದಲ್ವಾ? ಐಪಿಎಸ್ ಅಧಿಕಾರಿಗೆ ನೋಟಿಸ್ ಕೊಡ್ತೀರಾ, ಹೀಗಾದರೆ ಈ ಜಿಲ್ಲೆಯಲ್ಲಿ ಆಡಳಿತ ಹೇಗೆ ನಡೆಸುತ್ತೀರಿ ಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆಡಳಿತ ಕೊಲ್ಯಾಪ್ಸ್ ಆಗುತ್ತೆ ಎಂದು ಕಿಡಿಕಾರಿದ್ದಾರೆ.
