Sunday, October 11, 2026
Homeಗ್ರೇಟರ್ ಬೆಂಗಳೂರುದಸರಾ ಸ್ಪೆಷಲ್:‌ KSRTCಯಿಂದ ​3,000ಕ್ಕೂ ಹೆಚ್ಚು ವಿಶೇಷ ಬಸ್ ಸೇವೆ

ದಸರಾ ಸ್ಪೆಷಲ್:‌ KSRTCಯಿಂದ ​3,000ಕ್ಕೂ ಹೆಚ್ಚು ವಿಶೇಷ ಬಸ್ ಸೇವೆ

Telegram Group
Join Now

ಬೆಂಗಳೂರು: ದಸರಾ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಆರಂಭವಾಗಿರುವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದ ನಾನಾ ಪ್ರದೇಶಗಳಿಗೆ ರಾಜಧಾನಿಯಿಂದ ಬಸ್​ ಸಂಚಾರ ಹೆಚ್ಚಿಸಲಾಗಿದೆ. ಹಬ್ಬದ ರಜಾ ದಿನದಲ್ಲಿ ಉಂಟಾಗುವ ದಟ್ಟಣೆ ನಿಭಾಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್​ಆರ್​ಟಿಸಿ) ಹೆಚ್ಚುವರಿ ಬಸ್ ಸೇವೆ ಒದಗಿಸಿದೆ.

ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಸುವವರಿಗೆ ಹಾಗೂ ರಜೆಯ ನಂತರ ಬೆಂಗಳೂರಿಗೆ ಮರಳುವವರ ಅನುಕೂಲಕ್ಕಾಗಿ ಈ ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ. ಅಕ್ಟೋಬರ್ 16 ಮತ್ತು 20 ರ ನಡುವೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳು ಸಂಚರಿಸಲಿವೆ. ವಾಪಸಾತಿ ಪ್ರಯಾಣಕ್ಕಾಗಿ ಅಕ್ಟೋಬರ್ 20 ಮತ್ತು 21 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!