Sunday, October 11, 2026
Homeಜಿಲ್ಲಾಸುದ್ದಿಕಡೂರು ಪಟ್ಟಣದಲ್ಲಿ ಜೆಡಿಎಸ್‌ನ 'ರೈತ ಸ್ವಾಭಿಮಾನ ಯಾತ್ರೆ': ನಿಖಿಲ್ ಕುಮಾರಸ್ವಾಮಿ ನೇತೃತ್ವ

ಕಡೂರು ಪಟ್ಟಣದಲ್ಲಿ ಜೆಡಿಎಸ್‌ನ ‘ರೈತ ಸ್ವಾಭಿಮಾನ ಯಾತ್ರೆ’: ನಿಖಿಲ್ ಕುಮಾರಸ್ವಾಮಿ ನೇತೃತ್ವ

Telegram Group
Join Now

ಚಿಕ್ಕಮಗಳೂರು: ಕಡೂರು ಪಟ್ಟಣದಲ್ಲಿ ಇಂದು  ಜೆಡಿಎಸ್‌ನ ‘ರೈತ ಸ್ವಾಭಿಮಾನ ಯಾತ್ರೆ’ ನಡೆಯುತ್ತಿದೆ.ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಬೃಹತ್ ಹೋರಾಟ ಮತ್ತು ಪಾದಯಾತ್ರೆ ಆಯೋಜನೆಗೊಂಡಿದೆ. ಯೂತ್ ಫೈರ್ ಬ್ರ್ಯಾಂಡ್ ಚೇತನ್ ಕೆಂಪರಾಜು ಸಾಥ್‌ ನೀಡಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ, ರೈತರ ಸಾಲ ಮನ್ನಾ, ಕೃಷಿಗೆ ನಿರಂತರ ವಿದ್ಯುತ್ ಪೂರೈಕೆ ಮತ್ತು ಸೂಕ್ತ ಬರ ಪರಿಹಾರಕ್ಕಾಗಿ ಆಗ್ರಹಿಸಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ

ಪಕ್ಷವನ್ನ ಅಧಿಕಾರಕ್ಕೆ ತರಲು ಯುವ ಕಣ್ಮಣಿಗಳು ಪಣ ತೊಟ್ಟಿದ್ದು  ನಿಖಿಲ್-ಚೇತನ್ ನೋಡಲು ಜನಸಾಗರವೇ ಹರಿದುಬಂದಿದೆ.

ಈ ವೇಳೆ ವೈಎಸ್ ವಿ ದತ್ತ, ಭೋಜೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಭಿಮಾನಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!