Wednesday, November 4, 2026
Homeಗ್ರೇಟರ್ ಬೆಂಗಳೂರು‌Bus Fare Hike: ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಶಾಕ್: ಇಂದು ಮಧ್ಯ ರಾತ್ರಿಯಿಂದಲ್ಲೇ ...

‌Bus Fare Hike: ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಶಾಕ್: ಇಂದು ಮಧ್ಯ ರಾತ್ರಿಯಿಂದಲ್ಲೇ ದರ ಏರಿಕೆ!

Telegram Group
Join Now

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಾಲು, ಮೊಸರಿನ ಬೆಲೆ ಏರಿಕೆ ಮಾಡಿ ಕನ್ನಡಿಗರಿಗೆ ಶಾಕ್ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ, ಇದೀಗ ಬಸ್ ಟಿಕೆಟ್ ದರ ಏರಿಸಿ, ಮತ್ತೊಂದು ದುಬಾರಿ ಗಿಫ್ಟ್ ಕೊಡಲು ಮುಂದಾಗಿದೆ. ಇಂದು ಮಧ್ಯ ರಾತ್ರಿಯಿಂದಲ್ಲೇ ಬೆಲೆ ಏರಿಕೆ ಆಗಲಿದ್ದು ಕೆಎಸ್​​​ಆರ್​​​ಟಿಸಿಯಲ್ಲಿ 9 ರೂ. ಟಿಕೆಟ್​​​ ದರ ಏರಿಕೆ ಆಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಕಳೆದ 10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತು ಎಂದು ಪ್ರಸ್ತಾಪಿಸಿದ್ದಾರೆ.

ಈಗಾಗಲೇ ಸಾರಿಗೆ ಸಂಸ್ಥೆಗಳು 9 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿವೆ. ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ 2 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಅಂತ ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಈ ನಷ್ಟವನ್ನು ಸರಿದೂಗಿಸಬೇಕು ಅಂದರೆ ಬಸ್ ಟಿಕೆಟ್ ದರ ಏರಿಸಲೇಬೇಕು ಅಂತ ಸಮರ್ಥನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!