Thursday, November 19, 2026
Homeಕ್ರೈಮ್ಲಷ್ಕರ್‌ ಉಗ್ರ ಲತೀಫ್‌ ಭಟ್‌ ಹೊಡೆದುರುಳಿಸಿದ ಸೇನೆ : ಕಲ್ಗಾಮ್‌ನ ಮಸೀದಿಯಲ್ಲಿ‌ ಅಡಗಿದ್ದ ಉಗ್ರ ಮಟಾಷ್‌

ಲಷ್ಕರ್‌ ಉಗ್ರ ಲತೀಫ್‌ ಭಟ್‌ ಹೊಡೆದುರುಳಿಸಿದ ಸೇನೆ : ಕಲ್ಗಾಮ್‌ನ ಮಸೀದಿಯಲ್ಲಿ‌ ಅಡಗಿದ್ದ ಉಗ್ರ ಮಟಾಷ್‌

Telegram Group
Join Now

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್‌ನ ಜಂಗಲ್‌ಪೋರಾದಲ್ಲಿ ಎಲ್‌ಇಟಿ ಉಗ್ರ ಸಂಘಟನೆಯ ಕಮಾಂಡರ್‌ ಲತೀಫ್‌ ಭಟ್‌ನನ್ನ ಸೇನೆ ಹೊಡೆದುರುಳಿಸಿದೆ. 3 ಅಂತಸ್ತಿನ ಮಸೀದಿಯಲ್ಲಿ ಲತೀಫ್‌ ಭಟ್‌ ಅಡಗಿ ಕುಳಿತಿದ್ದ. ಮಸೀದಿ ಸುತ್ತುವರೆದ ಸೇನೆ & ಪೊಲೀಸರು ಸರೆಂಡರ್‌ ಆಗುವಂತೆ ಸೂಚಿಸಿದ್ದಾರೆ.

ವಿಡಿಯೋ ಕಾಲ್‌ ಮಾಡಿ ಮನವಿ ಮಾಡಿದ್ದಾರೆ. ಆದ್ರೆ ಉಗ್ರ ಲತೀಫ್‌, ʻನಾನು ಸಾಯಲು ಸಿದ್ದನಿದ್ದೇನೆ. ನಾನು ಅಲ್ಲಾಹನಿಗಾಗಿಯೇ ಬಂದಿದ್ದೇನೆ. ನಾನು ಅಲ್ಲಾಹನ ಬಳಿ ಹೋಗಬೇಕುʼ ಅಂತಾ ಧರ್ಮದ ಅಫೀಮು ತಲೆಗೆ ತುಂಬಿಕೊಂಡು ಒದರಿದ್ದ. ʻಈತ ಸರೆಂಡರ್‌ ಆಗೋ ಪ್ರಾಣಿ ಅಲ್ಲʼ ಅನ್ನೋದನ್ನ ಅರಿತ ಸೇನೆ, ಎನ್‌ಕೌಂಟರ್‌ ಆಪರೇಷನ್‌ ಶುರು ಮಾಡಿತ್ತು.

ಅತ್ತ ಕಡೆಯಿಂದ ಗುಂಡು ಹಾರುತ್ತಿದ್ದಂತೆ. ಸೇನಾ ಪಡೆ ಕೂಡ ಫೈರಿಂಗ್‌ ಮಾಡಿ ಲತೀಫ್‌ ಭಟ್‌ನ ಪ್ರಾಣ ಹಾರಿಸಿದೆ. ಇದಕ್ಕೂ ಮುನ್ನ ಅಂದ್ರೆ ನವೆಂಬರ್‌ 16 ರಂದು ಉಮರ್‌ ಅನ್ನೋ ಉಗ್ರನ ಜೊತೆ ಲತೀಫ್‌ ಕುಲ್ಗಾಮ್‌ ತುಂಬಾ ಸುತ್ತಾಡಿದ್ದ. ಆ ಮೂಲಕ ನವೆಂಬರ್‌ 11 ರಂದು ಸಿಆರ್‌ಪಿಎಫ್‌ ಆರ್ಮಿ ಕ್ಯಾಂಪ್‌ ಮೇಲೆ ನಡೆದಿದ್ದ ದಾಳಿಯಲ್ಲಿ ಲತೀಫ್‌ ಪಾತ್ರ ಸ್ಪಷ್ಟವಾಗಿತ್ತು. ಅಂದಿನಿಂದ‌ ಲತೀಪ್‌ ಸೇರಿ ಆತನ ಸಹಚರರಿಗೆ ಸೇನೆ ಮತ್ತು ಪೊಲೀಸರು ಸರ್ಚ್‌ ಆಪರೇಷನ್‌ ನಡೆಸಿ ಪ್ರತೀಕಾರ ತೀರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!