Friday, February 13, 2026
Homebig breakingಬಳ್ಳಾರಿ ಜೈಲ್‌ಗೆ ಕೊಲೆ ಆರೋಪಿ ದರ್ಶನ್‌ ಶಿಫ್ಟ್‌ - ನ್ಯಾಯಾಲಯ ಸಮ್ಮತಿ

ಬಳ್ಳಾರಿ ಜೈಲ್‌ಗೆ ಕೊಲೆ ಆರೋಪಿ ದರ್ಶನ್‌ ಶಿಫ್ಟ್‌ – ನ್ಯಾಯಾಲಯ ಸಮ್ಮತಿ

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್‌ ಆಗಿದ್ದ ಕೊಲೆ ಆರೋಪಿ ದರ್ಶನ್‌ನನ್ನು ಬಳ್ಳಾರಿ ಜೈಲ್‌ಗೆ ಸ್ಥಳಾಂತರ ಮಾಡೋದಕ್ಕೆ ನ್ಯಾಯಾಲಯ ಸಮ್ಮತಿಸಿದೆ.
ಜೈಲಲ್ಲಿ ಐಷಾರಾಮಿ ಜೀವನದ ವಿಚಾರ ಬೆಳಕಿಗೆ ಬಂದ ನಂತರ ಸರ್ಕಾರ ಕೂಡಾ ಮುಜುಗರಕ್ಕೀಡಾಗಿತ್ತು. ಹೀಗಾಗಿ ಆರೋಪಿಗಳನ್ನ ಬೇರೆ ಜೈಲಿಗೆ ಶಿಫ್ಟ್‌ ಮಾಡುವ ಸಂಬಂಧ 24ನೇ ಎಸಿಎಂಎಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ದರ್ಶನ್‌ ಜತೆಗೆ ಇತರೆ ಆರೋಪಿಗಳನ್ನು ಕೂಡಾ ರಾಜ್ಯದ ಬೇರೆ ಬೇರೆ ಜೈಲ್‌ಗೆ ಸ್ಥಳಾಂತರಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಇಂದು ತಡರಾತ್ರಿ ಅಥವಾ ಬುಧವಾರ ಆರೋಪಿಗಳನ್ನು ಸ್ಥಳಾಂತರಿಸಿ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!