Tuesday, June 30, 2026
Homeಇತರೆʼಎನಿವೇರ್ ರಿಜಿಸ್ಟ್ರೇಷನ್‌ʼ - ಚಿಕ್ಕಮಗಳೂರಿನಲ್ಲಿ ಸೆ.02ರಿಂದ ಜಾರಿಗೆ

ʼಎನಿವೇರ್ ರಿಜಿಸ್ಟ್ರೇಷನ್‌ʼ – ಚಿಕ್ಕಮಗಳೂರಿನಲ್ಲಿ ಸೆ.02ರಿಂದ ಜಾರಿಗೆ

ಪಬ್ಲಿಕ್‌ ಇಂಪ್ಯಾಟ್‌ ಚಿಕ್ಕಮಗಳೂರು : ರಾಜ್ಯದಲ್ಲಿ ಸ್ಥಿರಾಸ್ತಿಗಳ ನೋಂದಣಿ ಸಂಬಂಧ ಅನುಷ್ಠಾನಗೊಳಿಸಿರುವ ʼಎನಿವೇರ್‌ ರಿಜಿಸ್ಟ್ರೇಷನ್‌ʼ ಪ್ರಕ್ರಿಯೆಗೆ ಚಿಕ್ಕಮಗಳೂರು ಉಪನೋಂದಣಿ ಕಚೇರಿಯಲ್ಲಿ ಸೆ.2ರಿಂದ ಆರಂಭವಾಗಲಿದೆ.
ನೂತನ ವ್ಯವಸ್ಥೆಯ ಜಾರಿಯಿಂದ ಸ್ವತ್ತುಗಳ ಕ್ರಯ, ದಾನ ವಿಭಾಗ, ಆಧಾರ, ಭೋಗ್ಯ, ಜಿಪಿಎ, ವಿಲ್‌ ಸೇರಿದಂತೆ ಇನ್ನಿತರೆ ವ್ಯವಹಾರಗಳನ್ನು ಜಿಲ್ಲೆಯ 7 ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ನೋಂದಣಿ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಹಾಜರಿದ್ದು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗುತ್ತದೆ. ತಾವು ಕಚೇರಿಗೆ ತೆರಳುವ ಸಂದರ್ಭ ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ಅನ್ನೂ ಜತೆಗೆ ತಂದು ಸಹಕರಿಸುವಂತೆ ಜಿಲ್ಲಾ ನೋಂದಣಾಧಿಕಾರಿ ಕರಿಯಮ್ಮ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments