Wednesday, February 11, 2026
HomeಇತರೆPDO ಬಿಂದಾಸ್‌ ಜೀವನ - ತನಿಖಾ ತಂಡ ರಚಿಸಿ ವಿಚಾರಣೆ ಎಂದ CEO

PDO ಬಿಂದಾಸ್‌ ಜೀವನ – ತನಿಖಾ ತಂಡ ರಚಿಸಿ ವಿಚಾರಣೆ ಎಂದ CEO

ಮಂಡ್ಯ : ಸಿನೆಮಾ ಸ್ಟೈಲ್‌ನಲ್ಲಿ ಪಿಡಿಒ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಮಂಡ್ಯ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಂಟರ್ಟೈನ್ಮೆಂಟ್ ಹಾಗೂ ಸಿನಿಮ್ಯಾಟಿಕ್ ರೀತಿ ವೀಡಿಯೋ ಮಾಡಲಾಗಿದೆ. ಕರ್ನಾಟಕ ಸರ್ವೀಸ್ ರೂಲ್ ಪ್ರಕಾರ ಯಾವುದೇ ಎಂಟರ್ಟೈನ್ಮೆಂಟ್ ಪರ್ಪಸಸ್ ಗೆ ಮಾಡಿದರು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದರು.
ತನಿಖಾ ತಂಡ ರಚನೆ ಮಾಡಿ ವಿಚಾರಣೆ ನಡೆಸಲಾಗುವುದು. ಘಟನೆಯ ಪೂರ್ವಾಪರ ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತೆ. ಅವರು ಸಿನಿಮಾ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರುತ್ತೆ. ಮಳವಳ್ಳಿಯಲ್ಲಿ ಇದ್ದ ಸಂದರ್ಭದಲ್ಲಿ ಒಂದು ಪ್ರಕರಣದಲ್ಲಿ ಅಮಾನತ್ತಾಗಿ, ಈಗ ಹಲಗೂರಿನಲ್ಲಿ ಕೆಲಸ ಮಾಡಿದ್ದಾರೆ. ಹಿಂದಿನ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!