Wednesday, February 11, 2026
Homeಇತರೆನಿರ್ಮಾಣ ಹಂತದ ಸಂಪ್‌ಗೆ ಬಿತ್ತು ಹಸು - ಮುಂದೇನಾಯ್ತು..?

ನಿರ್ಮಾಣ ಹಂತದ ಸಂಪ್‌ಗೆ ಬಿತ್ತು ಹಸು – ಮುಂದೇನಾಯ್ತು..?

ಶಿವಮೊಗ್ಗ : ನೀರಿನ ತೊಟ್ಟಿಗೆ ಬಿದ್ದಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ. ಭದ್ರಾವತಿ ತಾಲೂಕಿನ ಹೊಳೆಗಂಗೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದಲ್ಲಿ ನೂತನ ಮನೆ ನಿರ್ಮಾಣಕ್ಕಾಗಿ ಎಂಟು ಅಡಿ ಆಳದ ಸಂಪ್ ನಿರ್ಮಾಣ ಮಾಡಲಾಗಿತ್ತು. ಅದರ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ಅಡಿಕೆ ದಬ್ಬೆ ಹಾಕಿ ಮುಚ್ಚಲಾಗಿತ್ತು. ಕೊಟ್ಟಿಗೆಗೆ ಹೋಗಬೇಕಿದ್ದ ಹಸು ಆಕಸ್ಮಿಕವಾಗಿ ಆ ಸಂಪ್‌ಗೆ ಬಿದ್ದಿದೆ. ಇದನ್ನ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಭದ್ರಾವತಿ ಅಗ್ನಿಶಾಮಕ ದಳ ಸಿಬ್ಬಂದಿ ಹಸುವಿಗೆ ಬೆಲ್ಟ್ ಕಟ್ಟಿ ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಒಂದು ಗಂಟೆಗೂ ಹೆಚ್ಚು ನಡೆದ ಕಾರ್ಯಾಚರಣೆ ನಡೆಸಿ ಹಸುವನ್ನು ಮೇಲೆತ್ತಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!