ಸಾಮಾನ್ಯವಾಗಿ ತುಟಿಗಳ ಅಂದವನ್ನು ಹೆಚ್ಚಿಸಲು ಹೆಚ್ಚಾಗಿ ಬಣ್ಣ ಬಣ್ಣದ ಲಿಪ್ಸ್ಟಿಕ್ ಬಳಸುತ್ತೇವೆ. ಆದರೆ ಆ ಲಪ್ಸ್ಟಿಕ್ಗಳಿಂದ ಅಡ್ಡಪರಿಣಾಮ ಹೆಚ್ಚು. ಹೀಗಾಗಿ ನೀವು ಮನೆಯಲ್ಲಿಯೇ ಲಿಪ್ ಬಾಮ್ ಅನ್ನು ತಯಾರಿಸಿಕೊಳ್ಳಬಹುದು.
ಪ್ರತಿದಿನ ರಾತ್ರಿ ಮಲಗುವ ಮುನ್ನ ತುಟಿಗಳನ್ನು ಚೆನ್ನಾಗಿ ತೊಳೆದು ಬೆಣ್ಣೆ ಅಥವಾ ಜೆನುತುಪ್ಪವನ್ನು ತುಟಿಗಳಿಗೆ ಹಚ್ಚಿ ಮಲಗುವುದರಿಂದ ನಿಮ್ಮ ತುಟಿಗಳು ಸಾಪ್ಟ್ ಆಗಿರುವುದರ ಜೊತೆಗೆ ಇದು ತುಟಿಗಳನ್ನು ತೇವಗೊಳಿಸುತ್ತದೆ. ಒಂದು ಟೊಮ್ಯಾಟೋ ಹಣ್ಣನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಹಾಕಿ ತುಟಿಗಳ ಮೇಲೆ ಚೆನ್ನಾಗಿ ಉಜ್ಜುವುದರಿಂದ ತುಟಿ ಮೇಲಿರುವ ಡೆಡ್ ಸ್ಕಿನ್ ತೆಗೆದು ಹಾಕುತ್ತದೆ. ಹಾಗೇ ವಿಟಮಿನ್ ಇ ಕ್ಯಾಪ್ಸುಲನ್ನು ತುಟಿಗೆ ಹಚ್ಚುವುದರಿಂದ ತುಟಿಗಳು ಸಾಪ್ಟ್ & ಸ್ಮೂತ್ ಆಗಿರುತ್ತದೆ.

ಮನೆಯಲ್ಲೇ ಲಿಪ್ ಬಾಮ್ ತಯಾರಿಸುವ ವಿಧಾನ
ಒಂದು ಬೀಟ್ರೂಟ್ ಅನ್ನು ಚೆನ್ನಾಗಿ ತುರಿದುಕೊಳ್ಳಬೇಕು. ಅದರ ರಸವನ್ನು ತೆಗೆದು ಡಬಲ್ ಬಾಯ್ಲಿಂಗ್ ಸಿಸ್ಟಮ್ನಲ್ಲಿ ಆ ರಸವನ್ನು ಹಾಕಿ ಅದಕ್ಕೆ ಸ್ವಲ್ಪ ವ್ಯಾಸಲಿನ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಕಂಟೆನರ್ ಡಬ್ಬಿಯೊಳಗೆ ಹಾಕಿ ಇಟ್ಟುಕೊಂಡರೆ ಪ್ರತಿ ದಿನ ಬೆಳಗ್ಗೆ ಇದನ್ನು ಲಿಪ್ಸ್ಸ್ಟಿಕ್ ರೀತಿ ಬಳಸಬಹುದು
