Monday, March 30, 2026
Homeಇತರೆಬೆಚ್ಚಿಬಿತ್ತು ಕರ್ನಾಟಕ..! : ಮಹಿಳೆಯ ಬರ್ಬರ ಹತ್ಯೆ - ದೇಹವನ್ನು 30 ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ...

ಬೆಚ್ಚಿಬಿತ್ತು ಕರ್ನಾಟಕ..! : ಮಹಿಳೆಯ ಬರ್ಬರ ಹತ್ಯೆ – ದೇಹವನ್ನು 30 ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ ಹಂತಕ..!

ಬೆಂಗಳೂರು : ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯೊಬ್ಬರನ್ನು ಹತ್ಯೆ ಮಾಡಿ, ದೇವಹವನ್ನು 30 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ವೈಯ್ಯಾಲಿಕಾವಲ್‌ನ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಈ ಭೀಕರ ಪ್ರಕರಣ ನಡೆದಿದೆ. ಹತ್ಯೆಗೊಳಗಾದ ಮಹಿಳೆಯನ್ನು ನೇಪಾಳ ಮೂಲದ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಘಟನೆ ನಡೆದು 10-15 ದಿನ ಆಗಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವೈಯ್ಯಾಲಿಕಾವಲ್‌ ಪೊಲೀಸರು, ಎಫ್‌ಎಸ್‌ಎಲ್‌ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ನೆರೆಕರೆಯ ನಿವಾಸಿಗಳು ಆ ಮನೆಯಲ್ಲಿದ್ದವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾದಂತಹ ಯುವತಿಯ ಸಂಬಂಧಿಕರು ಬೀಗ ಒಡೆದು ಒಳ ಹೋಗಿ ನೋಡಿದಾಗ ಭೀಕರತೆ ಕಣ್ಣಿಗೆ ಬಿದ್ದಿದೆ.
ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 30ಕ್ಕೂ ಹೆಚ್ಚು ಪೀಸ್ ಮಾಡಿ ಸಿಂಗಲ್ ಡೋರ್​ನ 165 ಲೀಟರ್ಸ್ ಫ್ರೀಡ್ಜ್​ನಲ್ಲಿಡಲಾಗಿದೆ. ಮೃತ ಯುವತಿಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಗಂಡನಿಂದ ಬೇರ್ಪಟ್ಟಿದ್ದ ಮಹಿಳೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು ಅಂತ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!