Saturday, March 28, 2026
Homeಆರೋಗ್ಯಡ್ರೈ ಸ್ಕಿನ್‌ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಟೆನ್ಶನ್‌ ಬಿಡಿ, ಈ ಸರಳ ಉಪಾಯ ಪಾಲಿಸಿ..

ಡ್ರೈ ಸ್ಕಿನ್‌ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಟೆನ್ಶನ್‌ ಬಿಡಿ, ಈ ಸರಳ ಉಪಾಯ ಪಾಲಿಸಿ..

ಒಣ ಚರ್ಮ ಅನ್ನುವುದು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಅದರಲ್ಲೂ ಮುಖ, ಕೈ ಉತ್ತಮ ತ್ವಚೆಯಿಂದ ಕೂಡಿರಬೇಕು ಅಂತ ಪ್ರತಿಯೊಬ್ಬರು ಕೂಡಾ ತಮ್ಮ ಆದೇ ರೀತಿಯ ಪರಿಹಾರೋಪಾಯವನ್ನು ಕಂಡುಕೊಳ್ಳುತ್ತಿರುತ್ತಾರೆ. ನಾವು ಹೇಳುವ ಸರಳ ಉಪಾಯವನ್ನು ಪಾಲಿಸಿದ್ರೆ ಸಾಕು ನಿಮ್ಮ ಡ್ರೈ ಸ್ಕಿನ್‌ ಮಾಯವಾಗಿ, ಉತ್ತಮ ತ್ವಚೆಯಿಂದ ಕೂಡಿರುತ್ತದೆ.


ಪ್ರತಿದಿನ ಬಾದಾಮಿ ಎಣ್ಣೆಯನ್ನು ಬಳಸಿವುದರಿಂದ ನಿಮ್ಮ ಡ್ರೈ ಸ್ಕಿನ್ ದೂರವಾಗುತ್ತದೆ ಮುಖ ಹಾಗೂ ಕೈಕಾಲು ಸಿಕ್ಕಾಪಟ್ಟೆ ಡ್ರೈ ಆಗಿದ್ದರೆ ಪ್ರತಿದಿನ ಸ್ನಾನ ಮಾಡುವ ಮುನ್ನ ಮುಖ ಕೈ ಕಾಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿ 10 ರಿಂದ 15 ನಿಮಿಷ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಚರ್ಮ ಸುಕ್ಕುಕಟ್ಟುವುದು ನಿಲ್ಲುತ್ತದೆ. ಡ್ರೈ ಸ್ಕಿನ್‌ ಕೂಡಾ ದೂರವಾಗುತ್ತದೆ.


ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಯನ್ನು ಹಚ್ಚಿ ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳುವುದರಿಂದ ಒಣ ಚರ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಕಡಲೆ ಹಿಟ್ಟು, ಜೇನುತುಪ್ಪ, ಹಾಲು ಹಾಗೂ ಚಿಟಿಕೆ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳುವುದರಿಂದ ಡ್ರೈ ಸ್ಕಿನ್ ಅನ್ನು ಆದಷ್ಟು ಬೇಗ ಕಡಿಮೆಯಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!