Wednesday, August 12, 2026
Homeಬ್ರೇಕಿಂಗ್ ನ್ಯೂಸ್ಮುಂದುವರೆದ ವಿರಾಟ್‌ ಕಳಪೆ ಫಾರ್ಮ್‌ - ರಣಜಿ ಪಂದ್ಯದಲ್ಲಿ ಒಂದಂಕಿಗೆ ವಿಕೆಟ್‌ ಒಪ್ಪಿಸಿದ ಕಿಂಗ್‌ ಕೋಹ್ಲಿ...

ಮುಂದುವರೆದ ವಿರಾಟ್‌ ಕಳಪೆ ಫಾರ್ಮ್‌ – ರಣಜಿ ಪಂದ್ಯದಲ್ಲಿ ಒಂದಂಕಿಗೆ ವಿಕೆಟ್‌ ಒಪ್ಪಿಸಿದ ಕಿಂಗ್‌ ಕೋಹ್ಲಿ – ಸ್ಟೇಡಿಯಂ ತೊರೆದ ಅಭಿಮಾನಿಗಳು

Telegram Group
Join Now

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೋಹ್ಲಿ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಮರಳಿ ತಮ್ಮ ಹಳೆಯ ಫಾರ್ಮ್‌ಗೆ ಮರಳುವ ಉದ್ದೇಶದಿಂದ ರಣಜಿ ಪಂದ್ಯ ಆಡುತ್ತಿದ್ದಾರೆ. ದೆಹಲಿ ತಂಡದ ಆಡುತ್ತಿದ್ದು, ಕೋಹ್ಲಿ ಆಟ ನೋಡೋದಕ್ಕೆ ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂಗೆ ಕ್ರಿಕೆಟ್‌ ಅಭಿಮಾನಿಗಳ ಸಾಗರವೇ ಹರಿದುಬಂದಿದೆ. ಆದ್ರೆ ಇಂದು ಅವರ ಪ್ರದರ್ಶನ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ರೈಲ್ವೇಸ್‌ ತಂಡದ ಮಧ್ಯಮ ವೇಗಿ ಹಿಮಾಂಶು ಸಾಂಗ್ವಾನ್‌ ಬೌಲಿಂಗ್‌ನಲ್ಲಿ ಸ್ಟೈಟ್‌ ಡ್ರೈವ್‌ ಮೂಲಕ ಒಂದು ಬೌಂಡರಿ ಸಿಡಿಸಿ ಅಬ್ಬರಿಸುವ ಭರವಸೆ ಮೂಡಿಸಿದ ಮರು ಎಸೆತದಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಲೀನ್‌ ಬೌಲ್ಡ್‌ ಆದರು. ಆರು ರನ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆ ಮೂಲಕ ರಣಿಜಿ ಪಂದ್ಯದಲ್ಲೂ ಕಳಪೆ ಫಾರ್ಮ್​ ಮುಂದುವರಿದಿದೆ.
ಸರಿಸುಮಾರು 13 ವರ್ಷದ ಬಳಿಕ ರಣಜಿ ಕ್ರಿಕೆಟ್ ಆಡಿದ್ದಾರೆ ಕೋಹ್ಲಿ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೈಲ್ವೇಸ್‌ 241 ರನ್​ಗಳಿಗೆ ಆಲ್​ಔಟ್ ಆಯಿತು. ಎರಡನೇ ದಿನ ಕೊಹ್ಲಿ ದೆಹಲಿ ತಂಡದ ಪರ ಬ್ಯಾಟಿಂಗ್‌ಗೆ ಇಳಿದರು. ಕೊಹ್ಲಿ ಬ್ಯಾಟಿಂಗ್​​ಗೆ ಇಳಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ಉತ್ಸಾಹ, ಹರ್ಷೋದ್ಘಾರ ಜೋರಾಗಿತ್ತು. ಆದರೆ ಅವರು ಒಂದಂಕಿಗೆ ಔಟ್‌ ಆಗಿ ಮರಳುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಕೂಡಾ ಅಲ್ಲಿಂದ ವಾಪಸ್ಸಾದರು.
ರಣಜಿ ಕ್ರಿಕೆಟ್‌ ಟೂರ್ನಿ ವೀಕ್ಷಣೆಗೆ ಬೆರಳೆಣಿಕೆ ಮಂದಿ ಮಾತ್ರ ಆಗಮಿಸುತ್ತಿದ್ದರು. ಆದರೆ ಕೋಹ್ಲಿ ದೆಹಲಿ ಪರ ಆಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಸವಾಲೊಡ್ಡುವಂತೆ ಅಭಿಮಾನಿಗಳು ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಸೇರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments