Saturday, May 30, 2026
Homeಸಿನೆಮಾಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಾಯಭಾರಿ: ವರ್ಣರಂಜಿತ, ವರ್ಣಾತಿತ ಕಲಾವಿದ

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಾಯಭಾರಿ: ವರ್ಣರಂಜಿತ, ವರ್ಣಾತಿತ ಕಲಾವಿದ

ದಾವಣಗೆರೆ: ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿಯನ್ನು ಹೆಚ್ಚು ಮಾಡುವುದು ತಾಯಿಯ ಮಡಿಲು. ರವಿಚಂದ್ರನ್ ಗೆ ತಂದೆ ತಾಯಿ ಹೆಗಲಾಗಿದ್ದಾರೆ. ಅವರ ಜನ್ಮದಿನಾಚಣೆಯನ್ನು ಸಂಗೀತ ಸಾಮ್ರಾಟ್ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದಲ್ಲಿ ಮಾಡುತ್ತಿರುವುದು ಅರ್ಥಪೂರ್ಣ ಮತ್ತು ಶ್ಘಾಘನೀಯ. ಕನ್ನಡ ನಾಡಿನ ಸಿನಿಮಾರಂಗದಲ್ಲಿ ಹಿರಿಯ ಮುತ್ಸದ್ದಿಯಾಗಿರುವ ಕ್ರೇಜಿಸ್ಟಾರ್ ಡಾ.ವಿ ರವಿಚಂದ್ರನ್ ಅವರು ಸಿನಿಮಾ ರಾಯಭಾರಿಯಾಗಿದ್ದಾರೆ ಎಂದು ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್ ಹೇಳಿದರು.
ಅಖಿಲ ಕರ್ನಾಟಕ ದಾವಣಗೆರೆ ಜಿಲ್ಲಾ ರವಿಚಂದ್ರನ್ ಅಭಿಮಾನಿಗಳ ಸಂಘ, ಕರ್ನಾಟಕ ಪೋಟೋ ಗ್ರಾಫರ್ ಮತ್ತು ವೀಡೀಯೇ ಗ್ರಾಫರ್ ಅಸೋಸಿಯೇಷನ್ ಹಾಗೂ ಮನು ಪೊಟೋಗ್ರಫಿ ಅಂಡ್ ಇವೆಂಟ್ಸ್ ವತಿಯಿಂದ 65 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಾಡಾ ಕ್ರಾಸ್ ನಲ್ಲಿರುವ ಪುಟ್ಟರಾಜ ಗವಾಯಿಗಳ ಅಂದ ಮಕ್ಕಳ ಪುಣ್ಯಾಶ್ರಮದಲ್ಲಿ ನಡೆದ ಅನ್ನಸಂತರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಹಣಗಳಿಸದಿರಬಹುದು ಆದರೆ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಡಾ. ರಾಜ್ ಕುಮಾರ್. ವಿಷ್ಣುವರ್ಧನ್ , ಅಂಬರೀಶ್ ಅವರ ಜೊತೆಯಲ್ಲಿ ಸಿನಿಮಾ ಪಯಣ ಮಾಡಿ ಸಮಕಾಲಿನರಾಗಿ ಹಿರಿಯರಾಗಿದ್ದು ಅವರ ಹುಟ್ಟು ಹಬ್ಬವನ್ನು ದಾವಣಗೆರೆ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು. ರವಿಚಂದ್ರನ್ ಅಭಿಮಾನಿಯಾಗಿರುವ ಮನು ಅವರು 25 ವರ್ಷದಿಂದ ಸೇವಾ ಕಾಯಕ ಮಾಡಿಕೊಂಡು ಬರುತ್ತಿದ್ದು ಸಾರ್ಥಕ ಎಂದರು.

ದಿವ್ಯಸಾನಿಧ್ಯವಹಿಸಿದ್ದ ಆವರಗೊಳ್ಳದ ಪುರವರ್ಗ ಹಿರಿಯ ಮಠದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇವತ್ತು ಸಂಘಟನೆಗಳು ಮೋಜಿಗೆ, ಗುಂಪುಗಾರಿಕೆ ಮಾಡಿ ದುಂದು ವೆಚ್ಚ ಮಾಡುವ ಕಾರ್ಯಕ್ರಮಗಳು ಹೆಚ್ಚಾಗಿವೆ. ಆದರೆ ಪುಣ್ಯಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ ಅರ್ಥಪೂರ್ಣ, ರವಿಚಂದ್ರನ್ ಅವರು ಹಿರಿಯ ಕಲಾವಿದ ಎನ್ನುವುದಕ್ಕಿ ಆದರ್ಶ ಮಹಾಪುರುಷ. ಅವರ ಕೊಡುಗೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ ಕುಮಾರ್ ನಂತರ ಬರುವ ಮೇರು ನಟ. ಇವರ ಸಂದೇಶ ಅಮೋಘ ಎಂದರು.

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಬಿ.ಜೆ. ಅಜಯ್ ಕುಮಾರ್ ಮಾತನಾಡಿ, ರವಿಚಂದ್ರನ್ ಒಬ್ಬ ಮೇರು ನಟ. ಅವರು ಕರೆಯ ನೀರನ್ನು ಕೆರೆಗೆ ಚೆಲ್ಲಿಎನ್ನುವಂತೆ ಕೋಟಿಗಟ್ಟಲೆ ದಾನ ಮಾಡಿದ್ಧಾರೆ. ಚಿತ್ರದಿಂದ ಬಂದಂತ ಹಣವನ್ನು ಮತ್ತೆ ಚಿತ್ರರಂಗಕ್ಕೆ ಹಾಕಿದ್ದಾರೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟಂತ ಸೇವೆ ಅಪಾರ. ಹಂಸಲೇಖ ಶ್ರೀರಾಮಚಂದ್ರ, ರವಿಚಂದ್ರನ್ ಆಂಜನೇಯ ಇದ್ದಂತೆ ಇದ್ದರು. ಅವರ ಸಿನಿಮಾಗಳಿಗೆ ಹಂಸಲೇಖ ಅಪಾರ ಶ್ರಮಹಾಕಿದ್ಧಾರೆ. ಪರಬಾಷೆಯ ನಟಿಯನ್ನು ಕರೆಸಿ ಕನ್ನಡ ಚಿತ್ರರಂಗದಲ್ಲಿ ಅವಕಾಶ ಕೊಟ್ಟರು. ಚಿತ್ರ ಮಾಂತ್ರಿಕ. ಅವರ ಸಾಧನೆ ಅಪಾರ ಅಮೋಘ, ಕೇವಲ ಚಿತ್ರರಂಗ ಅಲ್ಲ ಟಿವಿಗಳಲ್ಲೂ ಉತ್ತಮ ಗುಣಗಳನ್ನು ಅನಾವರಣ ಮಾಡುತ್ತಿದ್ದಾರೆ. ಇತ್ತೀಚೆಗೆ ಟಿವಿ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಪುಣ್ಯಾಶ್ರಮದಲ್ಲಿ ನಡೆದ ಸಿನಿಮಾ ನಟರ ಉತ್ತಮ ಕಾರ್ಯಕ್ರಮ ಇದಾಗಿದೆ.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ಮತ್ತು ಕಲಾ ಪರಂಪರೆಯನ್ನು ಶ್ರೀಮಂತ ಗೊಳಿಸುವಲ್ಲಿ ಕನ್ನಡ ಚಿತ್ರರಂಗದೊದಿಗೆ ಅವರ ಅನುಭವ, ಜ್ಞಾನ ಹಾಗೂ ದೂರದೃಷ್ಟಿ ಕಾಣುತ್ತಿದೆ. ಕನ್ನಡ ನಾಡಿಗೆ ತಂದೆ ವೀರಸ್ವಾಮಿ ಅವರು ಹಾಕಿಕೊಟ್ಟ ಈಶ್ವರಿ ಪ್ರೊಡಕ್ಷನ್ ನಲ್ಲಿ ಅನೇಕ ಮಹಾನ್ ನಟರನ್ನು ಕೊಟ್ಟಿದೆ. ಅನೇಕ ಕಲಾವಿದರನ್ನು ಸಾವಿರಾರು ಬದುಕುಗಳನ್ನ ಕೊಟ್ಟ ಕುಟುಂಬ ಎಂದರು.

ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ್ ಭಾಗವಹಿಸಿದ್ದರು. ಸಮಾರಂಭದಲ್ಲಿ ಅಖಿಲ ಕರ್ನಾಟಕ ದಾವಣಗೆರೆ ಜಿಲ್ಲಾ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮನು ಎಂ. ದೇವನಗರಿ ಅಧ್ಯಕ್ಷತೆವಹಿಸಿದ್ದು. ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ರಾಜ್ಯ ಮಾಧ್ಯಮ ಸಲಹೆಗಾರ ಮಾಲತೇಶ್ ಅರಸ್, ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಹನುಮಂತ ಹೆಚ್.ವೈ. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಎಂ.ಎನ್. ಕಾಂತರಾಜ್, ವಿಶ್ವ ಕರವೇ ರಾಜ್ಯ ಸಂಚಾಲಕ ಬಿ.ಈ . ದಯಾನಂದ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ.ಎಸ್. ಶಂಭು. ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೇಶ್ ಕೋಟೆಹಾಳ್, ಕರ್ನಾಟಕ ಪೋಟೋ ಗ್ರಾಫರ್ ಮತ್ತು ವೀಡೀಯೋ ಗ್ರಾಫರ್ ಅಸೋಸಿಯೇಷನ್ ಉಪಾಧ್ಯಕ್ಷ ಡಿ. ರಮೇಶ್, ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ. ಕಾರ್ಯದರ್ಶಿ ಡಿ ರಂಗನಾಥ್, ಮುಖಂಡ ದಿಗ್ವಿಜಯ್, ತರಳಬಾಳು ಜ್ಯೂಯರ‍್ಸ್ ಬಿ. ಆರ್. ಮಂಜುನಾಥ್, ಚಂದ್ರಮೌಳಿ. ಮಾಲಾ, ಸುಕನ್ಯಾ , ಮುರುಗೇಶ್,ಗಣೇಶ್ ಇತರರು ಇದ್ದರು.
ಸಮಾರಂಭಲ್ಲಿ ಪುಟ್ಟರಾಜ ಗವಾಯಿಗಳ ಅಂದ ಮಕ್ಕಳ ಪುಣ್ಯಾಶ್ರಮದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಸುಕನ್ಯಾ ಅವರು ನಿರೂಪಿಸಿದರು. ಹನುಮಂತ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!