Friday, July 31, 2026
Homeಕ್ರೈಮ್ಆಲ್ದೂರು: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ಸಾವು!

ಆಲ್ದೂರು: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ಸಾವು!

Telegram Group
Join Now

ಆಲ್ದೂರು: ಸಮೀಪದ ಬಿಳಿಗಿರಿ ಎಸ್ಟೇಟ್ ನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. ರಮೇಶ್ (27) ಹಾಗೂ ಮಹೇಶ್ (39) ಮೃತಪಟ್ಟ ಕಾರ್ಮಿಕರು.


ಕೊಪ್ಪ ತಾಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿಯಾದ ರಮೇಶ್ ಅವರು ಬಿಳಿಗಿರಿ ಎಸ್ಟೇಟ್ ನಲ್ಲಿ ಎರಡುವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು.

ಕಡವಂತಿ ಗ್ರಾಮದ ನಿವಾಸಿಯಾಗಿರುವ ಮಹೇಶ್ ಅವರು ಕುಟುಂಬದೊಂದಿಗೆ ಬಿಳಿಗಿರಿ ಎಸ್ಟೇಟ್ ನಲ್ಲಿ ಒಂದೂವರೆ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಲೈನ್ ನಲ್ಲಿ ವಾಸವಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.



RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments