Wednesday, August 12, 2026
Homeಕ್ರೈಮ್ಆಲ್ದೂರು: ಸಾಲ ಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ!

ಆಲ್ದೂರು: ಸಾಲ ಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ!

Telegram Group
Join Now

ಆಲ್ದೂರು: ಜಮೀನು ನಿರ್ವಹಣೆಗೆ ಮಾಡಿದ್ದ ಸಾಲ ತೀರಿಸಲಾಗದೆ ಈಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ವಸ್ತಾರೆ ಹೋಬಳಿ ಬಾಚಿಗನಹಳ್ಳಿ ಗ್ರಾಮದ ರೈತ ಬಿ.ಕೆ.ಪೂರ್ಣೇಶ್ (49) ಬುಧವಾರ  ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.

ಬಿ.ಕೆ,ಪೂರ್ಣೇಶ್ ಅವರು ತಮ್ಮ ಜಮೀನಿನಲ್ಲಿ ಕಾಫಿ,ಕಾಳು ಮೆಣಸು ಬೆಳೆ ಬೆಳೆಯಲು ಸಹಕಾರ ಸಂಘದಿಂದ ₹ 2 ಲಕ್ಷ  ಸಾಲವನ್ನು ಪಡೆದಿದ್ದರು. ಅಲ್ಲದೇ ₹3 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಅ.31ರಂದು ತೋಟದ ಗಿಡಗಳಿಗೆ ಸಿಂಪಡಣೆ ಮಾಡಲು ತಂದಿದ್ದ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೂಡಲೇ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಾಲ ಬಾಧೆಯಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬಸ್ಥರು ದೂರು ನೀಡಿದ್ದು, ಅದರಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments