Saturday, September 26, 2026
Homeಕ್ರೈಮ್ಕೊಪ್ಪ: ಜಮೀನು ವಿವಾದ: ಸರ್ವೇಗೆ ಹೋದವರ ಮೇಲೆ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಹಲ್ಲೆ!

ಕೊಪ್ಪ: ಜಮೀನು ವಿವಾದ: ಸರ್ವೇಗೆ ಹೋದವರ ಮೇಲೆ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಹಲ್ಲೆ!

Telegram Group
Join Now

ಕೊಪ್ಪ: ಜಾಗದ ಸರ್ವೆ ಮಾಡುವಾಗ ವ್ಯಕ್ತಿಯೊಬ್ಬ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಬಂದು ಸರ್ವೇಗೆ ಹೋದವರ ಮೇಲೆ ಹಲ್ಲೆ ನಡೆಸಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಚಿಕ್ಕನಗುಂಡಿಯಲ್ಲಿ ನಡೆದಿದೆ.

ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ ವ್ಯಾಜ್ಯ ಇತ್ತು. ಇದಕ್ಕಾಗಿ ಅಧಿಕಾರಿಗಳು ಸರ್ವೆಗೆ ಬಂದಿದ್ದರು. ಈ ವೇಳೆ ಸುರೇಶ್ ಏಕಾಏಕಿ ಬೆಂಕಿ ಹಿಡಿದು ಬಂದಿದ್ದಾನೆ. ಇದರಿಂದ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಘಟನೆ ಕಂಡು ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳು, ಪೊಲೀಸರು ಶಾಕ್ ಆಗಿದ್ದಾರೆ. ಸುರೇಶ್ ಅಣ್ಣ ತಮ್ಮರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆದಿದ್ದು,ಸರ್ವೆ ನಡೆಸುವಂತೆ ಕೊಪ್ಪ JMFC ಕೋರ್ಟ್​ ಆದೇಶಿಸಿದೆ.

ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಈ ವೇಳೆ ಸುರೇಶ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!