Wednesday, July 15, 2026
Homeಕ್ರೈಮ್ಬಾಳೆಹೊನ್ನೂರು: ತೋಟದ ಗೋಡೋನ್‌ನಿಂದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನ!

ಬಾಳೆಹೊನ್ನೂರು: ತೋಟದ ಗೋಡೋನ್‌ನಿಂದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನ!

Telegram Group
Join Now

ಎನ್.ಆ‌ರ್.ಪುರ: ತೋಟದ ಗೋಡೋನ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಕ್ಕಣಕ್ಕಿಯ ಸರ್ವೆ ನಂ 224 ರ ತೋಟದ ಮಾಲೀಕರಾದ ಕೆ. ಪ್ರಸಾದ್ ಮೂರ್ತಿ ಅವರು ಪ್ರತಿವರ್ಷದಂತೆ ರೈತರಿಂದ ಹಸಿ ಅಡಿಕೆ ಖರೀದಿಸಿ, ಸಂಸ್ಕರಿಸಿ ಗೋಡೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಏಪ್ರಿಲ್ 1 ರಂದು ಗೋಡೋನ್ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು.

ಆದರೆ ಏಪ್ರಿಲ್ 3 ರಂದು ಸಂಜೆ ಬಾಗಿಲು ತೆಗೆದು ನೋಡಿದಾಗ ಗೋಡೋನ್‌ನ ಮೇಲ್ಬಾಗದ ಹೆಂಚುಗಳನ್ನು ತೆಗೆದಿರುವುದು ಪತ್ತೆಯಾಗಿದೆ. ಒಟ್ಟು 149 ಮೂಟೆಗಳಲ್ಲಿ 7 ಅಡಿಕೆ ಮೂಟೆಗಳು ನಾಪತ್ತೆಯಾಗಿದ್ದು, ಕಳ್ಳರು ಹೆಂಚು ತೆಗೆದು ಒಳನುಗ್ಗಿ ಮುಂಭಾಗದ ಡೋರ್ ಮೂಲಕ ಮೂಟೆಗಳನ್ನು ಸಾಗಿಸಿರುವುದು ತಿಳಿದುಬಂದಿದೆ.

ಕಳ್ಳತನವಾದ 70 ಕೆಜಿಯ 7 ಮೂಟೆಗಳ ಅಂದಾಜು ಮೌಲ್ಯ 2,50,000 ರೂಪಾಯಿಗಳಾಗಿದ್ದು, ವೈಯಕ್ತಿಕ ಕಾರಣಗಳಿಂದ ತಡವಾಗಿ ಪ್ರಸಾದ್ ಮೂರ್ತಿ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

ತೋಟದ ಮಾಲೀಕರಾದ ಕೆ. ಪ್ರಸಾದ್ ಮೂರ್ತಿ ಅವರು ಪ್ರತಿವರ್ಷದಂತೆ ರೈತರಿಂದ ಹಸಿ ಅಡಿಕೆ ಖರೀದಿಸಿ, ಸಂಸ್ಕರಿಸಿ ಗೋಡೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಏಪ್ರಿಲ್ 1 ರಂದು ಗೋಡೋನ್ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments