Thursday, July 30, 2026
Homeಕ್ರೈಮ್ಬಾಳೆಹೊನ್ನೂರು: ಅಡಿಕೆ ಕಳ್ಳತನ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್, 5.7 ಲಕ್ಷ ಮೌಲ್ಯದ ಸ್ವತ್ತು ವಶ

ಬಾಳೆಹೊನ್ನೂರು: ಅಡಿಕೆ ಕಳ್ಳತನ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್, 5.7 ಲಕ್ಷ ಮೌಲ್ಯದ ಸ್ವತ್ತು ವಶ

Telegram Group
Join Now

ಬಾಳೆಹೊನ್ನೂರು : ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ದಿನಾಂಕ 01.04.2026 ರಿಂದ 03.04.2026 ರ ನಡುವೆ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಾಳೆಹೊನ್ನೂರು ಪೊಲೀಸ್ ಠಾಣೆಯ ತಂಡವು ಯಶಸ್ವಿಯಾಗಿರುತ್ತದೆ. ಬಂಧಿತರಿಂದ 5.7 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಬನ್ನೂರು ಗ್ರಾಮದ ತೋಟದ ಗೋಡೌನ್ ಹೆಂಚು ತೆಗೆದು ಅಡಿಕೆ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸ್ ತಂಡವು, ₹2,70,000/- ಮೌಲ್ಯದ 10 ಚೀಲ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಸೂಪರ್ ಕ್ಯಾರಿ ಗೂಡ್ಸ್ ವಾಹನ ಮತ್ತು ಓಮಿನಿ ಕಾರನ್ನು ಜಪ್ತಿ ಮಾಡಿದೆ.

ಸಿಪಿಐ ನರಸಿಂಹರಾಜಪುರ ವೃತ್ತ ಗುರುದತ್ ಕಾಮತ್ ರವರ ನೇತೃತ್ವದ ಪೊಲೀಸ್ ತಂಡದಲ್ಲಿ ಪಿಎಸ್ಐ ಬಾಳೆಹೊನ್ನೂರು ಅಂಬರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶಂಕರ್, ಶಂಕರಪ್ಪ ಎಂ ಬಿ, ಮನು, ಭೀಮಸೇನ್, ಗಿರೀಶ್ ಕುಮಾರ್, ಕಾರ್ತಿಕ್, ರಘು ಕೆ, ಆನಂದ ಬಿರಾದಾರ್, ಕಿರಣ್ ಕುಮಾರ್, ಮಂಜುನಾಥ ಬಿರಿಗಾಲ್ ಮತ್ತು ಚನ್ನಯ್ಯ ರವರು ಕಾರ್ಯನಿರ್ವಹಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments