Friday, July 31, 2026
Homeಕ್ರೈಮ್ಬೇಲೂರು: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದುರಂತ: ಕಾವಾಡಿಗನನ್ನೇ ತುಳಿದ ಸಾಕಾನೆ ʼಸುಗ್ರೀವʼ

ಬೇಲೂರು: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದುರಂತ: ಕಾವಾಡಿಗನನ್ನೇ ತುಳಿದ ಸಾಕಾನೆ ʼಸುಗ್ರೀವʼ

Telegram Group
Join Now

ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಡುವೆಯೇ ಭೀಕರ ದುರಂತವೊಂದು ಸಂಭವಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.

ಹೌದು… ಇಂದು ಬೆಳಿಗ್ಗೆ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಆನೆ ಶಿಬಿರದಲ್ಲಿ ಆನೆಗಳಿಗೆ ಆಹಾರ ನೀಡುವ ವೇಳೆ ಕಾರ್ಯಾಚರಣೆಗೆಂದು ಕರೆತರಲಾಗಿದ್ದ ಸಾಕಾನೆ ‘ಸುಗ್ರೀವ’, ತನ್ನದೇ ಕಾವಾಡಿಗನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ನಿನ್ನೆ ಸೆರೆ ಹಿಡಿದ ನಂತರ ತಪ್ಪಿಸಿಕೊಂಡು ಹೋಗಿದ್ದ ನರಹಂತಕ ಒಂಟಿಕೋರೆ ಕಾಡಾನೆ ಇಂದು ಕಾರ್ಯಾಚರಣೆಗೆ ಸಿದ್ದತೆ ನಡೆಸುತ್ತಿದ್ದ ಮಾವುತರು ಹಾಗೂ ಕಾವಾಡಿಗರು ಈ ವೇಳೆ ಕಾವಾಡಿಗ ರಾಜು ಎಂಬಾತನ ಮೇಲೆ ಅಟ್ಯಾಕ್ ಮಾಡಿದ ಸಾಕಾನೆ ಸುಗ್ರೀವ ಗಂಭೀರವಾಗಿ ಗಾಯಗೊಂಡಿರುವ ರಾಜುವನ್ನು ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಒಂದೆಡೆ ನರಹಂತಕ ಕಾಡಾನೆ ತಪ್ಪಿಸಿಕೊಂಡು ಭೀತಿ ಎದುರಾಗಿದ್ರೆ, ಮತ್ತೊಂದೆಡೆ ಪಳಗಿಸಿದ ಸಾಕಾನೆಯೇ ಮಾವುತರು ಮತ್ತು ಕಾವಾಡಿಗರ ಮೇಲೆ ತಿರುಗಿಬಿದ್ದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments