Thursday, May 14, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದವನ ಮನೆಯನ್ನ ಬುಲ್ಡೋಜರ್ ನಲ್ಲಿ ಹೊಡೆಸಬೇಕು : ಸಿ.ಟಿ.ರವಿ

ಚಿಕ್ಕಮಗಳೂರು: ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದವನ ಮನೆಯನ್ನ ಬುಲ್ಡೋಜರ್ ನಲ್ಲಿ ಹೊಡೆಸಬೇಕು : ಸಿ.ಟಿ.ರವಿ

ಚಿಕ್ಕಮಗಳೂರು: ಬೇಲೂರು ಪುರಸಭೆ ಆವರಣದಲ್ಲಿ ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಸಂಬಂಧ ಎಂಎಲ್ಸಿ ಸಿ.ಟಿ ರವಿ ಅವರು ಇದನ್ನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು .. ಇಂದು ಬೆಳಗಿನ ಜಾವ ಬೇಲೂರಿನ ಪುರಸಭೆ ಆವರಣದಲ್ಲಿರುವ ಗಣಪತಿಗೆ ಚಪ್ಪಲಿ ಹಾರ ಹಾಕಿದ್ದಾರೆ. ಇದೊಂದು ಕೋಮು ಗಲಭೆ ಸೃಷ್ಟಿ‌ ಮಾಡುವ ಸಂಚಿನ ಭಾಗವಾಗಿಯೇ ಚಪ್ಪಲಿ ಹಾರ ಹಾಕಿದ್ದಾರೆ ಸಜ್ಜನರಿಗೆ ಸಿಟ್ಟು ಬಂದ್ರೆ ದುರ್ಜನರು ಯಾರೂ ಉಳಿಯಲ್ಲ. ಯಾರು ತಪ್ಪು ಮಾಡಿದ್ದಾನೋ ಅವನ‌ ಮನೆಯನ್ನ ಬುಲ್ಡೋಜರ್ ನಲ್ಲಿ ಹೊಡೆಸಬೇಕು ಎಂದು ದುರುಳರ ವಿರುದ್ಧ ಕಿಡಿಕಾರಿದರು.

ಹಾಗೆ ಅವನು ಯಾವ ಜಾತಿ, ಯಾವುದೇ ಧರ್ಮಾದವನಾಗಿರಲಿ ನಾನೂ ಕೂಡಾ ಬೇಲೂರಿಗೆ ಹೋಗ್ತೀನಿ ನೀವು ಕ್ರಮ ಕೈಗೊಂಡು ಬುಲ್ಡೋಜರ್ ಹೊಡೆಸಿಲ್ಲ ಅಂದ್ರೆ ಸಮಾಜವೇ ಬುಲ್ಡೋಜರ್ ಹೊಡೆಸಬೇಕಾಗುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿ.ಟಿ‌ ರವಿ‌ ಅವರು ಕೆಂಡಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!