Wednesday, July 15, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಯಾವ ಸಾಧನೆ ಮಾಡಿದ್ದಾರೆ ಅಂತ ಸಮಾವೇಶ : ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

ಚಿಕ್ಕಮಗಳೂರು: ಯಾವ ಸಾಧನೆ ಮಾಡಿದ್ದಾರೆ ಅಂತ ಸಮಾವೇಶ : ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

Telegram Group
Join Now

ಚಿಕ್ಕಮಗಳೂರು: ರಾಜ್ಯ ಸರ್ಕಾರ ತುಮಕೂರಿನಲ್ಲಿ ನಡೆಸಿದ ಸಾಧನಾ ಸಮಾವೇಶ ಕುರಿತು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಯಾವ ಸಾಧನೆ ಮಾಡಿದ್ದಾರೆ ಅಂತ ಸಮಾವೇಶ ಮಾಡಿದ್ದಾರೆ ವಾಲ್ಮಿಕ್ಕಿ ಹಗರಣದ ದುಡ್ಡು ತಿಂದಿದ್ದೆ ದೊಡ್ಡ ಸಾಧನೆಯಾ ಎಂದರು

ಹಾಗೆ ಎಸ್.ಇ.ಪಿ.ಟಿ.ಎಸ್.ಪಿ. ಹಣ ದುರ್ಬಳಕೆ ಮಾಡಿಕೊಂಡಿದ್ದು ಸಾಧನೆಯಾ ಕಳೆದ 3 ವರ್ಷದಲ್ಲಿ ನಿಮ್ಮ ಸಾಧನೆ ಏನು, ಏನು ಮಹಾತ್ಕಾರ್ಯ ಮಾಡಿದ್ದೀರಾ ಕಾರ್ಮಿಕ ಇಲಾಖೆಯಲ್ಲಿ ದುಡ್ಡು ಹೊಡೆದದ್ದು ಸಾಧನೆಯಾ ಅಂಬೇಡ್ಕರ್ ನಿಗಮದಲ್ಲಿ ಬೋರ್ ಗೂ ದುಡ್ಡು ಕೊಡದಿರೋದಾ ಮೊದಲು ಇಂತದ್ದು ಸಾಧನೆ ಅಂತ ಹೇಳಿ ಆಮೇಲೆ ಸಮಾವೇಶ ಮಾಡಲಿ ಎಂದು ಕಿಡಿಕಾರಿದರು.

10 ತಿಂಗಳು ಗೃಹಲಕ್ಷ್ಮಿ ಹಣ ಹಾಕಿ 2 ತಿಂಗಳು ತಿಂದ್ವಿ ಅನ್ನೋದು ಸಾಧನೆಯಾ ಶಾಲಾ ಮಕ್ಕಳ ಮನಸ್ಸಲ್ಲಿ ಮತೀಯ ವಿಷ ಬೀಜ ಬಿತ್ತೋದು ಸಾಧನೆಯಾ ಅಂಬೇಡ್ಕರ್ ಮನೆ, ಗೃಹಭಾಗ್ಯ ಎಷ್ಟು ಕೊಟ್ಡಿದ್ದೀವಿ ಅಂತ ಹೇಳಲಿ ಯಾವ ನೀರಾವರಿ ಯೋಜನೆಯನ್ನ ಪೂರ್ಣಗೊಳಿಸಿದ್ದಾರೆ ಯಾವ ಉದ್ಯೋಗ ಸೃಷ್ಟಿಯಾಗುವ ಯೋಜನೆ ರೂಪಿಸಿದ್ದಾರೆಲೂಟಿ ಸಾಧನೆಯಲ್ಲ, ಇವರು ಮಾಡಿದ್ದು ಲೂಟಿ, ಅಧಿಕಾರ ದುರ್ಬಳಕೆ ಇವರು ಸಾಧನೆ ಮಾಡಿಲ್ಲ, ಮನೆಹಾಳು ಕೆಲಸಕ್ಕೆ ಸಾಧನೆ ಅಂತ ಕರೆದರೆ ಮನೆಹಾಳರು ಮಾತ್ರ ಒಪ್ಪಿಕೊಳ್ಳುತ್ತಾರೆ ಇನ್ಯಾರು ಒಪ್ಪಿಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments