Thursday, July 30, 2026
Homeಕ್ರೈಮ್Man commits suicide : ಮೂಡಿಗೆರೆಯಲ್ಲಿ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ: ಒಂಟಿತನದ ಶಂಕೆ

Man commits suicide : ಮೂಡಿಗೆರೆಯಲ್ಲಿ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ: ಒಂಟಿತನದ ಶಂಕೆ

Telegram Group
Join Now

ಮೂಡಿಗೆರೆ:ನೇಣು ಬಿಗಿದುಕೊಂಡು ಜಯಪ್ಪ ಗೌಡ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.

ನಳಂದ ಶಾಲಾ ಹಿಂಬಾಗದ ಸ್ವಂತ ಮನೆಯಲ್ಲಿ ಸುಮಾರು 35 ವರ್ಷಗಳಿಂದ ವಾಸಿಸುತ್ತಿದ್ದರು.

ಮೂಲತಃ ಕೊಡ್ಲಿಪೇಟೆಯಾವರಾದ ಇವರು ತಾಲೂಕಿನ ಗೋಣಿಬೀಡು ಗ್ರಾಮದ ಮಹಿಳೆಯನ್ನು ವರಿಸಿ ಮೂಡಿಗೆರೆ ಪಟ್ಟಣದಲ್ಲಿ ವಾಸಿಸುತ್ತಿದ್ದರು

ಕಳೆದ 8 ವರ್ಷಗಳ ಹಿಂದೆ ಪತ್ನಿ ತೀರಿಹೋಗಿದ್ದು ಒಬ್ಬಂಟಿಯಾಗಿ ವಾಸಿಸುತ್ತಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ

ಮಕ್ಕಳು ಕೆಲಸದಲ್ಲಿದ್ದು ಆಗಾಗ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದೂ ಮೃತ ಜಯಪ್ಪ ಗೌಡರಿಗೆ ಒಂಟಿತನ ಕಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವವನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣ ಮನೆಯವರಿಗೆ ವಿಷಯ ಮೂಡಿಗೆರೆ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments