ಮೂಡಿಗೆರೆ: ನೆಚ್ಚಿನ ನಾಯಕಿ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ಶ್ರೀಮತಿ ನಯನಾ ಮೋಟಮ್ಮ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವೆ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ದೀಕ್ಷಿತ್ ಕಣಚೂರು ಪ್ರತಿಕ್ರಿಯಿಸಿ, ನಯನಾ ಅವರು ಹಿರಿಯ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಮಗಳಾಗಿದ್ದು ಮೋಟಮ್ಮ ಅವರು ಜೀವನದ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಕಟ್ಟಾಳಾ ದುಡಿದಿದ್ದಾರೆ ಕಳೆದ 20 ವರ್ಷ ಗಳಿಂದ ಮೋಟಮ್ಮ ಅವರಿಗೆ ಉನ್ನತ ಹುದ್ದೆ ದೊರಕದಿರುವುದು ಕಾರ್ಯಕರ್ತರಿಗೆ ಬೇಸರ ಉಂಟಾಗಿದೆ. ಆದ್ದರಿಂದ ಪುತ್ರಿ ನಯನಾ ಅವರಿಗೆ ಸಚಿವೆ ಸ್ಥಾನ ನೀಡಿ ಹಿರಿಯ ನಾಯಕಿಯ ನಿಷ್ಠಾವಂತ ಸೇವೆಗೆ ಗೌರವ ಸಲ್ಲಿಸಿದತಾಗುತ್ತದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತರಲು ಇವರ ಕಾರ್ಯ ವೈಖರಿ ಶ್ಲಾಘನೀಯ, ಸೋಲಿನ ದಿನಗಳಲ್ಲಿ ಡ್ರತಿ ಗೆಡದೆ ಮುನ್ನುಗ್ಗಿ ಅಪಾರ ಸೇವೆ ಸಲ್ಲಿಸಿದ ಮೋಟಮ್ಮ ಅವರನ್ನು ನಾವು ಸದಾ ಸ್ಮರಿಸಬೇಕು

ಅದೇ ನಿಟ್ಟಿನಲ್ಲಿ ನಯನಾ ಮೋಟಮ್ಮ ಸಹ ನೂತನ ಶಾಸಕಿಯಾಗಿ ಯುವಕರಲ್ಲಿ ಹೊಸ ಚೈತನ್ಯ ತುಂಬಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜನರ ವಿಶ್ವಾಸ ಗಳಿಸಿ ಯಶಸ್ಸು ಸಾದಿಸಿದ ಯುವ ನಾಯಕಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಮನವಿ ಮಾಡಿದರು
