ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಕಲಿ ತುಪ್ಪದ ದಂಧೆ ಸೃಷ್ಟಿಸಿದ್ದ ಆತಂಕದ ಬೆನ್ನಲ್ಲೇ, ಇದೀಗ ನಕಲಿ ಜೇನುತುಪ್ಪದ ದಂಧೆಯೂ ವ್ಯಾಪಕವಾಗಿ ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಜೇನುಗೂಡಿಗೆ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳಿಯರ ಕೈಗೆ ವ್ಯಾಪಾರಿಗಳು ಲಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗಳು ಹಾಗೂ ದೊಡ್ಡ-ದೊಡ್ಡ ಕಟ್ಟಡಗಳನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಬಿಲ್ಡಿಂಗ್‌ನಲ್ಲಿ ಕಟ್ಟಿರೋ ಜೇನುಗೂಡನ್ನ ತೆಗೆದು ಜನರನ್ನ ನಂಬಿಸಲು ಅಲ್ಲೇ ಜೇನುತುಪ್ಪವನ್ನ ಕೊಡುತ್ತಾರೆ. ಬಳಿಕ ಅದೇ ಗೂಡನ್ನ ತಂದು ಯಾರೂ ಇಲ್ಲದ ಜಾಗದಲ್ಲಿ ಬೆಲ್ಲದ ಪಾಕ ಮಿಕ್ಸ್ ಮಾಡಿ ಬಳಿಕ ಅದನ್ನೇ ಅಸಲಿ ಜೇನು ಎಂದು ಮಾರಾಟ ಮಾಡುತ್ತಿದ್ದರು.
ಅಸ್ಸಾಂ ಮೂಲದ ಗ್ಯಾಂಗ್, ಜೇನುಗೂಡನ್ನ ತೆಗೆದು ತಂದು ನಿರ್ಜನ ಪ್ರದೇಶದಲ್ಲಿ ಬೆಲ್ಲದ ಪಾಕ ಮಿಕ್ಸ್ ಬಳಿಕ ಮಾರಾಟ ಮಾಡಲಾಗುತ್ತಿತ್ತು. ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಳಿ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳೀಯರು ಅಸ್ಸಾಂ ಮೂಲದ ಗ್ಯಾಂಗ್ ಅನ್ನು ರೆಡ್ ಹ್ಯಾಂಡ್ ಹಿಡಿದಿದ್ದು ಮೂವರನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
