Thursday, November 5, 2026
Homeಕ್ರೈಮ್Hasanambha Jatre: ಪ್ರೋಟೋಕಾಲ್ ವಿಚಾರ: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ ಜಿಲ್ಲಾಧಿಕಾರಿ!

Hasanambha Jatre: ಪ್ರೋಟೋಕಾಲ್ ವಿಚಾರ: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ ಜಿಲ್ಲಾಧಿಕಾರಿ!

Telegram Group
Join Now

ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಏಳನೇ ದಿನವೂ ಭಕ್ತರ ದಂಡೇ ಹರಿದುಬರುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು ಕುಂಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್, ಶಾಸಕಿ ಭಾಗೀರಥಿ ಹಾಗೂ ಎಂಎಲ್‌ಸಿ ಭೋಜೇಗೌಡ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬ ದೇವಿಯ ದರ್ಶನ ಪಡೆದರು.

ಪ್ರೋಟೋಕಾಲ್ ವಿಚಾರವಾಗಿ ಕರ್ತವ್ಯನಿರತ ಸಿಬ್ಬಂದಿಗೆ ಕೆಲವರಿಂದ ತೀವ್ರ ತೊಂದರೆಯಾಗುತ್ತಿರುವ ಘಟನೆ ನಡೆದಿದೆ. ರಾಮನಗರ ಹಾಗೂ ಕನಕಪುರದಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು  ಮತ್ತು ಅವರ ಕುಟುಂಬದವರು ಶಿಷ್ಟಾಚಾರದ ವಾಹನದಲ್ಲಿ ಪ್ರವಾಸಿ ಮಂದಿರದಿಂದ ದೇವಾಲಯಕ್ಕೆ ಬಂದಿದ್ದರು. ಅಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರ ಪ್ರಭಾವದಿಂದ ಐದಾರು ಮಂದಿ ಪ್ರೋಟೋಕಾಲ್‌ನಲ್ಲಿ ಆಗಮಿಸಿದ್ದರು.

ಈ ವೇಳೆ ವಾಹನದಲ್ಲಿ ಬಂದವರನ್ನ ದೇವಾಲಯದ ಮುಖ್ಯದ್ವಾರದ ಬಳಿಯ ಗೇಟ್ ಬಳಿ ವಿಎ (ಗ್ರಾಮ ಲೆಕ್ಕಾಧಿಕಾರಿ) ಇಳಿಸಿದ್ದರು. ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಒಳಗೆ ಕರೆದುಕೊಂಡು ಹೋಗಿ ದರ್ಶನದ ಸಾಲಿಗೆ ಸೇರಿಸುವಂತೆ ವಿಎ ಮನು ಸೂಚಿಸಿದ್ದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿಯೂ ಜೊತೆಯಲ್ಲಿ ಬರಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಆದರೆ, ಗೇಟ್‌ವರೆಗೆ ಮಾತ್ರ ನಾವು ನಿಮ್ಮ ಜೊತೆ ಬರಬೇಕು. ಎಡಿಸಿ ಅವರು ನಮಗೆ ಸೂಚನೆ ನೀಡಿದ್ದಾರೆ ಎಂದು ಮನು ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ವಿಎ ಮನು ವಿರುದ್ಧ ಕೂಗಾಡಿದ್ದಾರೆ. ದೇವಿ ದರ್ಶನ ಪಡೆದು ವಾಪಸ್ ಬಂದು ವಾಹನ ಹತ್ತುವ ಸಂದರ್ಭದಲ್ಲಿಯೂ ತಮ್ಮೊಂದಿಗೆ ಸಿಬ್ಬಂದಿ ಬರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ವಿಎ ವಿರುದ್ಧ ದೂರು ನೀಡಿದ್ದಾರೆ.

ಇದೇ ವೇಳೆ, ಇವರೆಲ್ಲ ಅತಿಥಿಗಳು, ಸಮಾಧಾನದಿಂದ ವರ್ತಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲೇ ಇದ್ದ ಸುಪ್ರೀತ್ ಎಂಬ ಅಧಿಕಾರಿಯ ವಿರುದ್ಧವೂ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ನಂತರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!