Tuesday, August 4, 2026
Homeಜಿಲ್ಲಾಸುದ್ದಿಗದ್ದೆಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳ ಪರಿಕರ ವಿತರಣೆ: ಕೆಲ ʼಕೈʼ ನಾಯಕರ...

ಗದ್ದೆಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳ ಪರಿಕರ ವಿತರಣೆ: ಕೆಲ ʼಕೈʼ ನಾಯಕರ ಅಡ್ಡಿ: ಸಂತೋಷ ಅರನೂರು ಬೇಸರ!

Telegram Group
Join Now

ಗದ್ದೆಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಳೆದ 13 ವರ್ಷದಿಂದ ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬ್ಯಾಗು ಯುನಿಫಾರಂ ಹಾಗೂ ಟ್ರ್ಯಾಕ್ ಸೂಟ್ ಗಳನ್ನ ಕೊಡುತ್ತಾ ಬಂದಿದ್ದಾರೆ.ಅವರ ಉದ್ದೇಶ ಸರ್ಕಾರಿ ಶಾಲಾ ಮಕ್ಕಳಿಗೂ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ತಾರತಮ್ಯ ಬರಬಾರದು ಎಂಬ ದೃಷ್ಟಿಯಿಂದ ಈ ಸೇವೆಯನ್ನು ತನ್ನ ಸ್ವಂತ ದುಡಿಮೆಯ ಹಣದಿಂದ ಮಾಡುತ್ತಿದ್ದಾರೆ.ಈ ಸೇವೆಗೆ ಕಾಂಗ್ರೆಸ್‌ ನಾಯಕರು ಅಡ್ಡಿಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಕೊಪ್ಪ ಅಧ್ಯಕ್ಷ ಸಂತೋಷ ಅರನೂರು ಆರೋಪಿಸಿದ್ದಾರೆ.

ಇದು ಶೃಂಗೇರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ ತೀರ್ಥಳ್ಳಿ ಕ್ಷೇತ್ರದಲ್ಲೂ ಹಲವಾರು ಮಕ್ಕಳಿಗೆ ಕೊಡುತ್ತಾ ಬಂದಿದ್ದಾರೆ. ಇದನ್ನು ಪೋಷಕರು ಹಾಗೂ ಮಕ್ಕಳು ಗ್ರಾಮಸ್ಥರು ಎಲ್ಲರೂ ಅವರನ್ನು ಸ್ಲಾಗಿಸಿದ್ದಾರೆ ಪ್ರೋತ್ಸಾಹಿಸಿದ್ದಾರೆ ಆದರೆ ನಿನ್ನಿಂದ ಕೊಪ್ಪ ತಾಲೂಕಿನ ಉತ್ತಮೇಶ್ವರ, ಅಗಳಗಂಡಿ. ಗುಡ್ಡೆ ತೋಟ, ಕೆಲವು ಸರ್ಕಾರಿ ಶಾಲೆಗಳಿಗೆ ಮಕ್ಕಳಿಗೆ ಅಗತ್ಯವಾದ ಪರಿಕರ ಗಳನ್ನ ಹಂಚುತ್ತಾರೆ ಎಂದು ಗೊತ್ತಾದ ತಕ್ಷಣ ಶಿಕ್ಷಣ ಇಲಾಖೆಯ ಮೂಲಕ ಕಾಂಗ್ರೆಸ್ಸಿನ ಕೆಲ ನಾಯಕರುಗಳು ಶಿಕ್ಷಕರಿಗೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಧಮ್ಕಿ ಹಾಕಿರುವುದು ಜೊತೆಗೆ BEO ಅವರಿಂದ ನೋಟಿಸ್ ಅನ್ನು ಕೊಡಿಸಿದ್ದಾರೆ. ಇದನ್ನು ತಿಳಿದ ಮೇಲೆ ಹಲವಾರು ಪೋಷಕರು ಗ್ರಾಮಸ್ಥರು ಹಾಗೂ ಮಕ್ಕಳು ತುಂಬಾ ಬೇಸರಪಟ್ಟಿಕೊಂಡಿದ್ದಾರೆ.

ಗದ್ದೆಮನೆ ವಿಶ್ವನಾಥ್ ಅವರು ಸಹ ತಮಗೆ ಆದ ನೋವನ್ನು ವ್ಯಕ್ತಪಡಿಸಿದರು. ನಾನು ನನ್ನ ಸ್ವಂತ ಹಣದಿಂದ ಸುಮಾರು 13 ವರ್ಷದಿಂದ ಕೊಡುತ್ತಾ ಬಂದಿದ್ದು ಕಳೆದ ವರ್ಷ 8,000 ಮಕ್ಕಳಿಗೆ ಕೊಟ್ಟಿದ್ದು ಈ ಸಾರಿ ಸುಮಾರು 16,300 ಮಕ್ಕಳಿಗೆ ಸುಮಾರು ಮೂರುವರೆ ನಾಲ್ಕು ಕೋಟಿ ವೆಚ್ಚದಲ್ಲಿ ಕೊಡುತ್ತಿದ್ದೇನೆ ಇದು ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಕೂಲಿ ಕಾರ್ಮಿಕರ ಬಡವರ ಮಕ್ಕಳಿಗೆ ನಾನು ಪ್ರೋತ್ಸಾಹ ನೀಡುತ್ತಿರುವ ನನ್ನ ವೈಯಕ್ತಿಕ ಆತ್ಮತೃಪ್ತಿ ಗೋಸ್ಕರ ಅಷ್ಟೇ ನಾನು ರಾಜಕೀಯ ಉದ್ದೇಶದಿಂದ ಈ ಕೆಲಸಗಳನ್ನು ಮಾಡುತ್ತಾ ಬಂದಿಲ್ಲ ಎಂದು ತಮಗಾದ ನೋವುಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಇದನ್ನು ಕೇಳಿದ ನಮಗೂ ಬೇಸರವಾಯಿತು ಈಗಾಗಲೇ ಸರ್ಕಾರ ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಪ್ರತಿಭಾ ಕಾರಂಜಿ ಇರಬಹುದು ಕ್ರೀಡಾಕೂಟಗಳಿರಬಹುದು ಅಥವಾ ಶಾಲೆಗೆ ಬೇಕಾದ ಕೆಲವು ಸವಲತ್ತುಗಳನ್ನು ಹಾಗೂ ಸಮಸ್ಯೆ ಆದ ಸಂದರ್ಭದಲ್ಲಿ ಸ್ಥಳೀಯ ದಾನಿಗಳ ಮೂಲಕ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಪಡೆದುಕೊಳ್ಳುತ್ತಿದ್ದಾರೆ.ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು.

ಆದರೆ ಗದ್ದೆಮನೆ ವಿಶ್ವನಾಥ್ ಅವರು ಕೊಡುತ್ತಿರುವ ಈ ಪರಿಕರಗಳನ್ನು ತಡೆಹಿಡಿಯುವ  ಹಾಗೂ ಇದನ್ನು ರಾಜಕೀಯ ದುರುದ್ದೇಶದಿಂದ ಹತ್ತಿಕ್ಕುವ ಕೆಲವು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಕ್ಷೇತ್ರದ ಶಾಸಕರು ತಮ್ಮ ಹಿಂಬಾಲಕರಿಗೆ ಕರೆದು ತಿಳಿ ಹೇಳಿ ಇಂತಹ ಕಾರ್ಯಗಳಿಗೆ ಸಹಕಾರ ನೀಡಿ ಶಿಕ್ಷಣದ ವಿಚಾರದಲ್ಲಿ ಸಣ್ಣ ರಾಜಕೀಯ ಮಾಡುವುದು ಬೇಡ ಎಂದು ಸೂಚನೆ ನೀಡಬೇಕು ಎಂದು ನಾನು ಪತ್ರಿಕೆ ಮೂಲಕ ಮನವಿ ಮಾಡುತ್ತಿದ್ದೇನೆ.

ಹಲವಾರು ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ತುಂಬಾ ಇದೆ ಹಾಗೂ ಮೂಲ ಸೌಕರ್ಯಗಳ ಕೊರತೆ ಇದೆ ಅದನ್ನ ತಮ್ಮ ಹಿಂಬಾಲಕರಿಗೆ ಸರಿಪಡಿಸಲು ಗಮನ ಹರಿಸಲು ತಿಳಿಸಿ. ಅದನ್ನು ಬಿಟ್ಟು ವಿಶ್ವನಾಥ ಅವರ ಈ ಉತ್ತಮ ಕಾರ್ಯಕ್ಕೆ ತೊಂದರೆ ಕೊಡುವುದು ಸರಿಯಲ್ಲ ಇದನ್ನ ಕ್ಷೇತ್ರಾದ್ಯಂತ ಹಲವಾರು ಶಿಕ್ಷಕರು ಪೋಷಕರು ಹಾಗೂ ಸಾರ್ವಜನಿಕರು ನಿಮ್ಮ ನಾಯಕರ ಇಂತಹ ಕಾರ್ಯಗಳನ್ನು ವಿರೋಧಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments