Tuesday, October 6, 2026
Homeಕ್ರೈಮ್Hassan: ಗಣೇಶ ವಿಸರ್ಜನೆ ನಿಷೇಧ ಉಲ್ಲಂಘನೆ: ಎಸ್‌ಪಿ ಶುಭನ್ವಿತಾಗೆ ನೋಟಿಸ್‌ ನೀಡಿದ ಡಿಸಿ ಲತಾಕುಮಾರಿ!

Hassan: ಗಣೇಶ ವಿಸರ್ಜನೆ ನಿಷೇಧ ಉಲ್ಲಂಘನೆ: ಎಸ್‌ಪಿ ಶುಭನ್ವಿತಾಗೆ ನೋಟಿಸ್‌ ನೀಡಿದ ಡಿಸಿ ಲತಾಕುಮಾರಿ!

Telegram Group
Join Now

ಹಾಸನ: ನಗರದ ಐತಿಹಾಸಿಕ ನೀರುಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ದೇವಿಗೆರೆ ಆವರಣದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಗೌರಿ – ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವಿರುದ್ಧ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ, ನೋಟಿಸ್ ತಲುಪಿದ ತಕ್ಷಣ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.

ಅಕ್ಟೋಬರ್ 3ರಂದು ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ನಿಯಮ ಮೀರಿ ಪೆಂಡಾಲ್ ಗೌರಿ-ಗಣಪತಿ ಮೂರ್ತಿಗಳನ್ನು ದೇವಿಗೆರೆ ಆವರಣದಲ್ಲಿ ವಿಸರ್ಜನೆ ಮಾಡಲು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಿಷೇಧಾಜ್ಞೆ ಉಲ್ಲಂಘಿಸಿ ವಿಸರ್ಜನೆ ಮಾಡಿದ ಆಯೋಜಕರ ವಿರುದ್ಧ ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ನಿಮ್ಮ ಈ ಬೇಜವಾಬ್ದಾರಿತನವು ಸರ್ಕಾರಿ ನೌಕರರಿಗೆ ತರವಲ್ಲದ್ದಾಗಿದ್ದು, ವಹಿಸಲಾದ ಕೆಲಸವನ್ನು ನಿರ್ವಹಿಸದೇ ಉದ್ಧಟತನ ತೋರಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಹಾಗೂ ಉದ್ಧಟತನಕ್ಕಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎದು ಪ್ರಶ್ನಿಸಿರುವ ಡಿಸಿ, ನೋಟಿಸ್ ತಲುಪಿದ ಕೂಡಲೇ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದ್ದಾರೆ. ತಪ್ಪಿದಲ್ಲಿ ಸರ್ಕಾರಕ್ಕೆ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!