Tuesday, October 6, 2026
Homeಗ್ರೇಟರ್ ಬೆಂಗಳೂರುಬೆಂಗಳೂರಲ್ಲಿ ಸುರಿದ ಮಳೆ ಅವಾಂತರಕ್ಕೆ ಲಾರಿ ಮೇಲೆ ಬಿದ್ದ ಬೃಹತ್‌ ಮರ: ಸುಮ್ಮನಹಳ್ಳಿ – ತುಮಕೂರು...

ಬೆಂಗಳೂರಲ್ಲಿ ಸುರಿದ ಮಳೆ ಅವಾಂತರಕ್ಕೆ ಲಾರಿ ಮೇಲೆ ಬಿದ್ದ ಬೃಹತ್‌ ಮರ: ಸುಮ್ಮನಹಳ್ಳಿ – ತುಮಕೂರು ಮುಖ್ಯ ರಸ್ತೆ ಬಂದ್!

Telegram Group
Join Now

ಬೆಂಗಳೂರು : ನಗರದಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆ ಅನಾಹುತಗಳು ಸಂಭವಿಸಿವೆ. ಹಾಗೆ ಗೊರಗುಂಟೆಪಾಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ಮರಗಳು ಹಾಗೂ ಕೊಂಬೆಗಳು ಧರೆಗುರುಳಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮರ ಬಿದ್ದಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು

ಹೌದು .. ಗೊರಗುಂಟೆಪಾಳ್ಯ ಸಿಗ್ನಲ್‌ ಬಳಿ ಲಾರಿ ಮೇಲೆ ಬೃಹತ್‌ ಮರವೊಂದು ಮುರಿದು ಬಿದ್ದಿದೆ. ಇದರಿಂದ ಸುಮ್ಮನಹಳ್ಳಿ – ತುಮಕೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬೆಳಗಿನ ಜಾವ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಿಗ್ನಲ್‌ನಲ್ಲಿ ಎರಡು ಕಾರು ಒಂದು ಲಾರಿ ನಿಂತಿದ್ದವು. ಈ ವೇಳೆ ಲಾರಿ ಮೇಲೆ ಮರ ಬಿದ್ದಿದೆ. ಲಾರಿ ಮೇಲೆ ಮರ ಬಿದ್ದಿದ್ದರಿಂದ ಎರಡು ಕಾರುಗಳು ಅಪಾಯದಿಂದ ಪಾರಾಗಿವೆ. ಅಕಸ್ಮಾತ್‌ ಮರ ಕಾರುಗಳ ಮೇಲೆ ಬಿದ್ದಿದ್ದರೆ ಭಾರೀ ಹಾನಿಯಾಗುವ ಸಾಧ್ಯತೆ ಇತ್ತು. ಇನ್ನೂ, ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!