ಮೂಡಿಗೆರೆ: ಪತ್ರಕರ್ತರು ಸಮಾಜದ ಆಸ್ತಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಪತ್ರಕರರಿಗೆ ನೋವುಂಟು ಮಾಡುವ ಪದ ಬಳಕೆ ಸಹಿಸಲ್ಲ ಎಂದು ಯುವ ಪತ್ರಕರ್ತ ಪುನೀತ್ ಕಡಿದಾಳು ತಿಳಿಸಿದ್ದಾರೆ.
ವಿಶ್ವ ಕರ್ಮ ಕುಟುಂಬ ಎಂಬ ವಾಟ್ಸ್ ಆಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ಪತ್ರಕರ್ತರು ಬರೆದ ಸುದ್ದಿಯನ್ನು ಸುಳ್ಳು ಸುದ್ದಿ ಎಂದು ಬಿಂಬಿಸಿದಲ್ಲದೆ ಇಂತಹ ಪತ್ರಕರ್ತರು ಸಮಾಜಕ್ಕೆ ದುರಂತ ಎಂದು ಬರೆದು ಅವಮಾನಿಸಿದ ಹಿನ್ನಲೆ ಇಂತಹ ಕಿಡಿಗೇಡಿಗಳು ಸಮಾಜಕ್ಕೆ ಮಾರಕ ಎಂದರು
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ಪ್ರಮುಖ ರಸ್ತೆಯು ಹಲವು ವರ್ಷಗಳಿಂದ ಗುಂಡಿಗಳಿಂದ ತುಂಬಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಂತ ಖರ್ಚಿನಲ್ಲೇ ಗುಂಡಿ ಮುಚ್ಚಲು ಸುಧಾ ರಘುಪತಿ ಪುರೋಹಿತ್ ದಂಪತಿಗಳು ಮುಂದಾದ ಘಟನೆ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ವರದಿ ಬಿತ್ತರಿಸಿತ್ತು. ಇದು ಒಂದು ಸುಳ್ಳು ಸುದ್ದಿ ಎಂದು ಇದನ್ನು ರಿಪೋರ್ಟ್ ಮಾಡಿದ ಪತ್ರಕರ್ತನ ಮೇಲೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ.
ಆದರೆ ಪತ್ರಕರ್ತರು ತಮ್ಮ ಕುಟುಂಬದ ಕೆಲಸ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಮಾಜದಲ್ಲಿ ಯಾವುದೋ ಮೂಲೆಯಲ್ಲಿ ಸಮಸ್ಸೆಯ ಬಗ್ಗೆ ದಾಖಲಾತಿ ಸಮೇತ ಸುದ್ದಿ ಮಾಡಿ ಸಮಾಜದ ಜನಪ್ರತಿನಿಧಿಗಳ ಗಮನ ಸೆಳೆಯುವ ಪತ್ರಕರ್ತರು ತಮ್ಮ ವೈಯಕ್ತಿಕ ಜೀವನ ಬದಿಗಿಡಿಸಿ ಕಾರ್ಯ ನಿರ್ವಹಿಸುತ್ತಿದ್ದು ಅವಮಾನಿಸಿದರೆ ಸರಿಯಲ್ಲ ಎಂದು ಗುಡುಗಿದರು
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕೇಳುವ ಹಕ್ಕಿದೆ ಆದರೆ ನೋವುಂಟು ಆಗುವ ರೀತಿಯಲ್ಲಿ ಕೇಳಲು, ಮನಬಂದಂತೆ ಸಂಪೂರ್ಣ ವಿಚಾರ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಸರಿಯಲ್ಲ ಎಂದರು.
ವಿಶ್ವಕರ್ಮ ಸಮಾಜದ ಬಗ್ಗೆ ಆಪಾರ ಗೌರವವಿದೆ ಇಂತಹ ವೈಯುಕ್ತಿಕ ಲಾಭಕ್ಕಾಗಿ ಸಂಘಟನೆ ಬಳಸಿಕೊಳ್ಳುವ ವ್ಯಕ್ತಿಗಳನ್ನು ಸಂಘಟನೆಯಿಂದ ಹಾಗೂ ಗುಂಪಿನಿಂದ ದೂರವಿಡಬೇಕು ಎಂದರು
